ಫ್ಲಿಪ್ಕಾರ್ಟ್ಗೆ ಸಾವಿರ ಕೋಟಿ ದಂಡ ಸಂಭವ
ದೇಶದ ಅತಿದೊಡ್ಡ ಆನ್ಲೈನ್ ರೀಟೇಲ್...
ನವದೆಹಲಿ: ದೇಶದ ಅತಿದೊಡ್ಡ ಆನ್ಲೈನ್ ರೀಟೇಲ್ ದೈತ್ಯ ಫ್ಲಿಪ್ಕಾರ್ಟ್ನ ವಿವಾದಾತ್ಮಕ 'ಬಿಗ್ ಬಿಲಿಯನ್ ಡೇ' ಈಗ ಜಾರಿ ನಿರ್ದೇಶನಾಲಯದ ಪರಿಶೀಲನೆಗೆ ಒಳಪಡಲಿದೆ.
ವ್ಯಾಪಾರಿಗಳು ಸಲ್ಲಿಸಿದ ದೂರಿನಂತೆ ಜಾರಿ ನಿರ್ದೇಶನಾಲಯ ಫ್ಲಿಪ್ಕಾರ್ಟ್ಗೆ ನೋಟಿಸ್ ಕೂಡ ನೀಡಿದೆ. ಒಂದು ವೇಳೆ ಫ್ಲಿಪ್ಕಾರ್ಟ್ ತಪ್ಪಿತಸ್ಥ ಎಂದು ಸಾಬೀತಾದರೆ ಸಾವಿರ ಕೋಟಿವರೆಗೆ ದಂಡ ವಿಧಿಸಬಹುದಾಗಿದೆ.
ಫ್ಲಿಪ್ಕಾರ್ಟ್ನ ಅತಿದೊಡ್ಡ ಡಿಸ್ಕೌಂಟ್ ಸೇಲ್ ಕುರಿತು ಕಳೆದ ವಾರ ಸಾಂಪ್ರದಾಯಿಕ ಮಾರಾಟಗಾರರಿಂದ ಸಾಕಷ್ಟು ದೂರು ಕೇಳಿ ಬಂದಿತ್ತು. ವ್ಯಾಪಾರಸ್ಥರು ಆನ್ಲೈನ್ ಮಾರಾಟಕ್ಕೆ ಸಂಬಂಧಿಸಿ ನಿಯಮಾವಳಿಗಳನ್ನು ರೂಪಿಸುವಂತೆಯೂ ಸರ್ಕಾರವನ್ನು ಒತ್ತಾಯಿಸಿದ್ದರು. ಇದೇ ವೇಳೆ ಫ್ಲಿಪ್ಕಾರ್ಟ್ ವಿರುದ್ಧ ಯಾವುದೇ ತನಿಖೆ ನಡೆಸುತ್ತಿಲ್ಲ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.
ಫ್ಲಿಪ್ ಕಾರ್ಟ್ ಹೇಳಿಕೊಂಡಿದ್ದು
ಬಿಗ್ ಬಿಲಿಯನ್ ಡೇ ಸೇಲ್ ವೇಳೆ 1.5 ದಶಲಕ್ಷ ಮಂದಿ ಫ್ಲಿಪ್ಕಾರ್ಟ್ನಲ್ಲಿ ಶಾಪಿಂಗ್
ಐದು ಲಕ್ಷ ಮಂದಿ ಮೊಬೈಲ್ ಹ್ಯಾಂಡ್ ಸೆಟ್, ಬಟ್ಟೆಗಳು ಮತ್ತು ಶೂಗಳ ಖರೀದಿ
25 ಸಾವಿರ ಟಿವಿ ಸೆಟ್ಗಳು ಗಂಟೆಯಲ್ಲೇ ಮಾರಾಟ
ಕೇವಲ 10 ಗಂಟೆಯ ಅವಧಿಯಲ್ಲಿ ರು.600 ಕೋಟಿಯ ಉತ್ಪನ್ನಗಳ ಮಾರಾಟ.