ಇಷ್ಟವಾಗಿದ್ರೆ ಮಾತ್ರ ಪಾಲಿಸಿ
ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಬೇಕು ಎಂಬುದೇ ವಿಮಾ ಕಂಪನಿಗಳ ಮುಖ್ಯ...
ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಬೇಕು ಎಂಬುದೇ ವಿಮಾ ಕಂಪನಿಗಳ ಮುಖ್ಯ ಉದ್ದೇಶ. ವಿಮಾದಾರರಿಗೆ ಕೊಟ್ಟ ಎಲ್ಲ ಭರವಸೆಗಳನ್ನು ಈಡೇರಿಸುವುದು ವಿಮಾ ಕಂಪನಿಗಳ ಮೂಲಭೂತ ಕರ್ತವ್ಯವೂ ಆಗಿರುತ್ತದೆ.
ಭವಿಷ್ಯತ್ತಿನಲ್ಲಿ ತಮ್ಮ ಪ್ರೀತಿಪಾತ್ರರಿಗೆ ತಾವಿಲ್ಲದೇ ಇದ್ದರೂ ಯಾವುದೇ ಆರ್ಥಿಕ ತೊಂದರೆಯಾಗದಿರಲಿ ಎಂಬ ಉದ್ದೇಶ ವಿಮಾ ಗ್ರಾಹಕನದಾಗಿರುತ್ತದೆ.
ವಿಮೆ ಹಣ ಪಾವತಿಯಲ್ಲಿ ಕಂಪನಿ ಪಾಲಿಸುವ ನಿಯಮಗಳು ಗ್ರಾಹಕರ ಮೇಲೆ ಪರಿಣಾಮ ಬೀರುತ್ತವೆ. ವಿಮೆ ಹಣ ಪಾವತಿ ಸಂದರ್ಭ ಗ್ರಾಹಕ ಮತ್ತು ಅವರ ಕುಟುಂಬಸ್ಥರಿಗೆ ಅನುಕೂಲವಾದರೆ ಗ್ರಾಹಕರ ಅಭಿಪ್ರಾಯಗರು ವಿಮಾ ಕಂಪನಿಗಳಿಗೆ ದೊಡ್ಡ ಜಾಹೀರಾತು ಇದ್ದಂತೆ. ಕೆಲವೊಂದು ಬಾರಿ ವಿಮೆ ಹಣ ಗ್ರಾಹಕನಿಗೆ ಸಿಗುವಲ್ಲಿ ವಿಳಂಬವಾಗುತ್ತೆ. ಯಾಕೆಂದರೆ ವಿಮೆ ಹಣವು ಮಾರುಕಟ್ಟೆಯಲ್ಲಿ ಕೆಲವೊಂದು ಅಪಾಯವನ್ನು ಎದುರಿಸುತ್ತಿರುತ್ತದೆ. ಮಾರುಕಟ್ಟೆಯಲ್ಲಿ ಏರಿಳಿತವಿರುವಾಗಲೂ ಗ್ರಾಹಕ ತನ್ನ ವಿಮೆ ಮೊತ್ತ ಜಾಗೃತವಾಗಿರಬೇಕು ಎಂದು ಬಯಸುತ್ತಾನೆ. ಕೆಲವೊಂದು ಬಾರಿ ಕಂಪನಿಗಳ ತಪ್ಪು ನಿರ್ಧಾರಗಳಿಂದಾಗಿ ಗ್ರಾಹಕನ ಹಣಕ್ಕೆ ಹೊಡೆತ ಬೀಳುವ ಸಾಧ್ಯತೆಗಳಿರುತ್ತದೆ.
ಹೀಗಾಗಿ ವಿಮಾ ಕಂಪನಿಗಳು ಎಲ್ಲ ಗ್ರಾಹಕರ ಹಣಕ್ಕೆ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ವಿಮೆ ಹಣ ಪಾವತಿ ಸಂದರ್ಭದಲ್ಲಿ ಯಾವುದೇ ತೊಂದರೆಯಾಗಬಾರದು ಎಂದಾದರೆ ಗ್ರಾಹಕರೂ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ.
ನೀವು ಆಯ್ದುಕೊಂಡ ವಿಮಾ ಯೋಜನೆಯಯ ನಿಯಾಮಾವಳಿಗಳನ್ನು ಸರಿಯಾಗಿ ಓದಿಕೊಳ್ಳಿ ಮತ್ತು ಎಲ್ಲ ಪ್ರಶ್ನೆಗಳಿಗೂ ಪ್ರಾಮಾಣಿಕವಾಗಿ ಉತ್ತರಿಸಿ.
ಪಾಲಿಸಿಯ ಅವಧಿ ಮತ್ತು ನಿಯಮಗಳನ್ನು ಚೆನ್ನಾಗಿ ಅರ್ಥೈಸಿಕೊಳ್ಳಬೇಕು ನಿಮಗೆ ಸೂಕ್ತವಾದ ಪ್ಲ್ಯಾನ್ ಆಯ್ದುಕೊಳ್ಳುವ ಅವಕಾಶವಿರುತ್ತದೆ. ಯಾವುದಾದರೂ ನಿಯಮಾವಳಿಗಳು ಇಷ್ಟವಾಗದೆ ಇದ್ದರೆ ಪಾಲಿಸಿಯನ್ನು ಕೂಡಲೇ ನಿಲ್ಲಿಸುವ ಮತ್ತು ಬೇರೆ ಯೋಜನೆಯ ಆಯ್ಕೆ ಸ್ವಾತಂತ್ರ್ಯ ಗ್ರಾಹಕನಿಗಿರುತ್ತದೆ.
ಯಾರಿಂದ ನೀವು ವಿಮೆ ಯೋಜನೆ ತೆಗೆದುಕೊಂಡಿದ್ದಿರೋ ಅವರಿಗೆ ನಿಮ್ಮ ಸಂಪರ್ಕ ದೂರವಾಣಿ ಸಂಖ್ಯೆ, ವಿಳಾಸ, ಈ -ಮೇಲ್ ವಿಳಾಸಗಳನ್ನು ಸರಿಯಾಗಿ ನೀಡಿ. ಬದಲಾದ ಸಂದರ್ಭದಲ್ಲಿ ತಿಳಿಸಿ. ಇದರಿಂದ ವಿಮಾ ಕಂಪನಿಯಿಂದ ಉತ್ತಮ ಸೇವೆ ಪಡೆಯಬಹುದು.
ವಿಮೆ ಮೊತ್ತವನ್ನು ಸಕಾಲದಲ್ಲಿ ಪಾವತಿಸಿ ಮತ್ತು ಪಾಲಿಸಿ ಲ್ಯಾಪ್ಸ್ ಆಗುವುದನ್ನು ತಪ್ಪಿಸಿ. ಒಂದು ವೇಳೆ ಪಾಲಿಸಿ ಲ್ಯಾಪ್ಸ್ ಆದರೆ ಕೆಲವೊಂದು ಅವಕಾಶದಿಂದ ನೀವು ವಂಚಿತರಾಗುತ್ತೀರಿ ಎಂದೇ ಅರ್ಥ. ವಿಮಾ ಮೊತ್ತ ಪಾವತಿಗೆ ಇಸಿಎಸ್/ ಅಟೋಡೆಬಿಟ್/ ಏಜೆಂಟ್ ಮೂಲಕ ಪಾವತಿಸುವುದು... ಮೊದಲಾದ ಸರಳ ವಿಧಾನವನ್ನು ಪಾಲಿಸಿದರೆ ವಿಮೆ ಮೊತ್ತ ಕಾಲಕಾಲಕ್ಕೆ ಪಾವಿತಯೂ ಆಗುತ್ತದೆ. ಇದರಿಂದ ಗ್ರಾಹಕನಿಗೆ ವಿಮೆ ಪಾವತಿ ಚಿಂತೆ ಬರುವುದಿಲ್ಲ.
ವಿಮಾ ಕಂಪನಿಗಳು ಪರಿಹಾರ ವಿತರಣೆ ವೇಳೆ ನೇಮಿಸುವ ಪರಿಶೀಲನಾ ಅಧಿಕಾರಿಗಳೊಂದಿಗೆ ಸಹಕರಿಸಿ. ಕಂಪನಿಯ ಯಾವುದೇ ನಿಯಮಾವಳಿಗಳು ಅರ್ಥವಾಗದಿದ್ದರೆ ಕೂಡಲೇ ಅವರ ನೆರವು ಪಡೆದುಕೊಳ್ಳಬಹುದು. ಈ ಸಂದರ್ಭದಲ್ಲಿ ಕಂಪನಿ ನೇಮಿಸಿರುವ ಯಾವುದೇ ಸಿಬ್ಬಂದಿ, ವ್ಯಕ್ತಿಗೆ ಅವರ ಸೇವೆಗೆ ಹಣ ಪಾವತಿಸಬಾರದು.
(ಲೇಖಕರು: ಅವಿವಾ ಲೈಫ್ ಇನ್ಶೂರೆನ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ)
-ಸ್ನೇಹಿಲ್ ಗಂಭೀರ್