ವಾಣಿಜ್ಯ

ಒರಿಗೊ ಕಮಾಡಿಟೀಸ್‌ನೊಂದಿಗೆ ಕೆನರಾ ಬ್ಯಾಂಕ್ ಒಪ್ಪಂದ

ಹೈದ್ರಾಬಾದ್/ನವ ದೆಹಲಿ, ಅಕ್ಟೋಬರ್ ೨೮, ೨೦೧೪:
ರೈತರಿಗೆ ಉಗ್ರಾಣ ಪಾವತಿ ಹಣಕಾಸು ನೆರವಿನ ಬೆಂಬಲವನ್ನು ಒದಗಿಸುವ ಉದ್ದೇಶದಿಂದ ಕೆನರಾ ಬ್ಯಾಂಕ್, ಬೆಳೆ ಇಳುವರಿ ನಂತರದ ನಿರ್ವಹಣಾ ಸೇವೆಗಳನ್ನು ಒದಗಿಸುವ ಸಂಸ್ಥೆ ಒರಿಗೊ ಕಮಾಡಿಟೀಸ್ ಇಂಡಿಯಾ ಪ್ರೈ. ಲಿ.ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ಈ ಉಗ್ರಾಣ ಪಾವತಿ ಹಣಕಾಸು ಯೋಜನೆ, ರೈತರಿಗೆ ಹಣಕಾಸಿನ ನೆರವನ್ನು ಒದಗಿಸುವುದರ ಜೊತೆಗೆ, "ಡಿಸ್ಟ್ರೆಸ್ ಸೇಲ್" (ದುಸ್ತರ ಮಾರಾಟ) ಅನ್ನು ತಪ್ಪಿಸುತ್ತದೆ. ಕೆನರಾ ಬ್ಯಾಂಕ್ ಮತ್ತು ಒರಿಗೊ ಕಮಾಡಿಟೀಸ್ ನಡುವಿನ ಈ ಒಪ್ಪಂದ, ಕರ್ನಾಟಕ ಆಂಧ್ರ ಪ್ರದೇಶ, ತಮಿಳು ನಾಡು ಮತ್ತು ಮಹಾರಾಷ್ಟ್ರ ಸೇರಿದಂತೆ ಇನ್ನೂ ಹಲವು ರಾಜ್ಯಗಳಲ್ಲಿ ತನ್ನ ಸೇವೆಗಳನ್ನು ತಲುಪಿಸುತ್ತದೆ.

ಈ ಪಾಲುದಾರಿಕೆಯ ಬಗ್ಗೆ ಮಾತನಾಡಿದ ಕೆನರಾ ಬ್ಯಾಂಕ್‌ನ ಪ್ರಧಾನ ಪ್ರಬಂಧಕ ಶ್ರೀ ಎಸ್. ರಮೇಶ್ ಅವರು, "ಬೆಳೆ ಉತ್ಪಾದನೆ ಸಾಲ ಯೋಜನೆ, ಬಹಳ ಮುಖ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಈ ಒಪ್ಪಂದ ಕೆನರಾ ಬ್ಯಾಂಕ್‌ನ ರೈತಾಪಿ ಗ್ರಾಹಕರಿಗೆ ಬಹಳ ನೆರವಾಗಲಿದೆ. ಈ ಒಪ್ಪಂದ ಎಲ್ಲರಿಗೂ ಅನುಕೂಲವನ್ನು ಮಾಡಿಕೊಡುವುದರ ಜೊತೆಗೆ, ರೈತರು ತಮ್ಮ ಇಳುವರಿಯನ್ನು ಹೆಚ್ಚಿಸಿಕೊಳ್ಳುವಲ್ಲಿ ಮತ್ತು ತಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸಿಕೊಳ್ಳುವಲ್ಲಿ ಲಾಭದಾಯಕವಾಗಲಿದೆ," ಎಂದು ವಿವರಿಸಿದರು.
ಕೆನರಾ ಬ್ಯಾಂಕ್, ದೇಶದ ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್‌ಗಳ ಪೈಕಿ ಒಂದಾಗಿದ್ದು, ಕೃಷಿ ಸಾಲಗಳನ್ನು ನೀಡಲು ಆರ್‌ಬಿಐ ನಿಗಧಿಪಡಿಸಿರುವ ಕಡ್ಡಾಯ ನಿಯಮಗಳನ್ನು ಸಾಧಿಸಿದೆ. ಮೆ| ಒರಿಗೊ ಕಮಾಡಿಟೀಸ್ ಜೊತೆ ಒಪ್ಪಂದವನ್ನು ಮಾಡಿಕೊಂಡಿರುವ ಕೆನರಾ ಬ್ಯಾಂಕ್ ಮುಂಬರುವ ಮಾಸದಲ್ಲಿ, ಈ ಉಗ್ರಾಣ ಪಾವತಿ ಹಣಕಾಸು ನೆರವು ಯೋಜನೆಚಿiಡಿ ಅಚಿದಾಜು ರೂ.೧,೦೦೦ ಕೋಟಿಗಳ ವ್ಯಾಪಾರದ ಗುರಿಯನ್ನು ಹೊಂದಿದೆ.
ಒರಿಗೊ ಕಮಾಡಿಟೀಸ್‌ನ ನಿರ್ದೇಶಕ ಮಾಯಾಂಕ್ ಧನುಕ ಅವರು ಈ ಸಂದರ್ಭದಲ್ಲಿ ಮಾತನಾಡಿ, "ಕೆನರಾ ಬ್ಯಾಂಕ್ ಜೊತೆಗಿನ ಈ ಸಹಯೋಗ, ಇನ್ನೂ ತಲುಪದೇ ಇರುವಂತಹ ಕ್ರಮಗಳನ್ನು ಮತ್ತು ಮುಂಬರುವ ಕೃಷಿ ಮಾಸದಲ್ಲಿ ರೈತರಿಗೆ ಅತ್ಯುತ್ತಮ ಬೆಂಬಲವನ್ನು ಒದಗಿಸಲಿದೆ," ಎಂದರು.
ಒರಿಗೊ ಕಮಾಡಿಟೀಸ್ ೧೫ ರಾಜ್ಯಗಳಲ್ಲಿ ತನ್ನ ಅಸ್ತಿತ್ವವನ್ನು ಹೊಂದಿದ್ದು, ತನ್ನ ಉಗ್ರಾಣ ಸೇವೆಗಳನ್ನು ಹೆಚ್ಚಿನ ರೈತರಿಗೆ, ಗರಿಷ್ಠ ಮಟ್ಟದವರೆಗೆ ವಿಸ್ತರಿಸುವ ಯೋಜನೆಯನ್ನು ಹೊಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್