ನವೆದೆಹಲಿ: ಜಾಗತಿಕ ಮಟ್ಟದಲ್ಲಿ ಚಿನ್ನದ ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಶುಕ್ರವಾರ ದೇಶದ ರಾಜಧಾನಿಯಲ್ಲೂ ಚಿನ್ನದ ಬೆಲೆ 10 ಗ್ರಾಂಗೆ ರು.600 ಕಡಿಮೆಯಾಗಿದೆ.
10 ಗ್ರಾಂ ಚಿನ್ನದ ಬೆಲೆ ರು.26,500 ಇಳಿಕೆ ಕಂಡಿದೆ. ಬೆಳ್ಳಿ ಕೆ.ಜಿಗೆ ರು.1,700ರಷ್ಟು ಇಳಿಕೆಯಾಗಿದ್ದು, 36,150 ತಲುಪಿದೆ. ಹೂಡಿಕೆದಾರರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗೆ ಮಂದಾಗಿರವುದು ಕೂಡ ಚಿನ್ನದ ಬೆಲೆ ಇಳಿಕೆಗೆ ಕಾರಣ ಎಂದು ಮೂಲಗಳಿಂದ ತಿಳಿದು ಬಂದಿದೆ.