ಎಸ್ಬಿಐನಿಂದ ಹೊಸ ಯೋಜನೆ
ಹದಿನೆಂಟು ವರ್ಷದ ಒಳಗಿನವರಿಗಾಗಿ ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್ ಬ್ಯಾಂಕ್ ಹೊಸ ಯೋಜನೆ ಜಾರಿ ಮಾಡಿದೆ. ಪೆಹೆಲಿ ಉಡಾನ್ ಎಂಬ ಹೆಸರಿನಲ್ಲಿ ಜಾರಿಯಾಗಿರುವ ಈ ಯೋಜನೆ 10 ವರ್ಷಕ್ಕಿಂತ ಮೇಲ್ಪಟ್ಟವರಿಗೆ. ಪೆಹೆಲಿ ಕದಂ ಎಂಬ ಯೋಜನೆ ಪೋಷಕರ ಉಸ್ತುವಾರಿಯಲ್ಲಿ ಮಕ್ಕಳು ಖಾತೆಯನ್ನು ನಿಭಾಯಿಸಲು ಅವಕಾಶ ನೀಡಲಾಗಿದೆ. ಇದಕ್ಕಾಗಿ ವಿಶೇಷವಾಗಿ ಪಾಕ್ಬುಕ್ ಮತ್ತು ಚೆಕ್ ಬುಕ್ಗಳನ್ನು ವಿನ್ಯಾಸಗೊಳಿಸಲಾಗಿದೆ.
ಪ್ರತಿ ದಿನ 25 ಸಾವಿರ ವಿಥ್ ಡ್ರಾ ಮಾಡಲು ಅವಕಾಶ ಕಲ್ಪಿಸಲಾಗಿದೆ. ಖಾತೆದಾರರಿಗೆ ಎಟಿಎಂ ಮತ್ತು ಡೆಬಿಟ್ ಕಾರ್ಡ್ ನೀಡಲಾಗುತ್ತದೆ. ನಿಗದಿತ ಠೇವಣಿ, ಬಿಲ್ ಪಾವತಿ ಮಾಡಲೂ ಅವಕಾಶ ಉಂಟು.