ಟ್ರೈನಿಗೆ ಬರುತ್ತೆ ಊಟ!
ದೂರದ ಸ್ಥಳಗಳಿಗೆ ರೈಲಿನಲ್ಲಿ ಪ್ರಯಾಣ ಮಾಡಲಿದ್ದೀರಾ? ಈ ವೇಳೆ...
ದೂರದ ಸ್ಥಳಗಳಿಗೆ ರೈಲಿನಲ್ಲಿ ಪ್ರಯಾಣ ಮಾಡಲಿದ್ದೀರಾ? ಈ ವೇಳೆ ನಿಮಗಿಷ್ಟವಾದ ಆಹಾರ ಸೇವಿಸಬೇಕಾ? ಹಾಗಿದ್ದರೆ ಟ್ರಾವೆಲ್ ಖಾನಾ ಮತ್ತು ಟೆಕ್ಸ್ಟ್ ವೆಬ್ ಮೂಲಕ ಎಸ್ಎಂಎಸ್ ಕಳುಹಿಸಿ ಆಹಾರ ಕಾಯ್ದಿರಿಸಬಹುದು. ಈ ಜಾಲತಾಣವು ಮೊಬೈಲ್ ಮೂಲಕ ಎಲ್ಲ ಬಳಕೆದಾರರನ್ನು ತಲುಪುವ ಉದ್ದೇಶವನ್ನಿಟ್ಟುಕೊಂಡಿದೆ.
ರೈಲಿನಲ್ಲಿ ಪಯಣಿಸುವವರು ದಾರಿಯುದ್ದಕ್ಕೂ ತಮಗೆ ಬೇಕಾದ ಆಹಾರವನ್ನು ಆರ್ಡರ್ ಮಾಡಿಕೊಂಡು ಪ್ರಯಾಣವನ್ನು ಮತ್ತಷ್ಟು ಸುಖಕರವನ್ನಾಗಿಸಬಹುದು. ಇದುವರೆಗೆ ಇಂಟರ್ನೆಟ್ ಸಂಪರ್ಕ ಇರುವವರಿಗೆ ಮಾತ್ರ ಆಹಾರ ಕಾಯ್ದಿರಿಸುವ ವ್ಯವಸ್ಥೆ ಸಿಗುತ್ತಿತ್ತು.
ಪ್ರಸ್ತುತ ಎಸ್ಎಂಎಸ್ ಕಳುಹಿಸುವ ಮೂಲಕ ಆಹಾರವನ್ನು ಕಾಯ್ದಿರಿಸಿಕೊಳ್ಳಬಹುದು. ಈ ಆ್ಯಪ್ನ ಪ್ರಯೋಜನ ಪಡೆಯಬೇಕಾದರೆ TravelKhanaದ 51115ಕ್ಕೆ ಎಸ್ಎಂಎಸ್ ಮಾಡಬಹುದಾಗಿದೆ.
ಇಲ್ಲಿಯ ವಿಶೇಷತೆ ಎಂದರೆ ಪಿಎನ್ಆರ್ ಸಂಖ್ಯೆಯನ್ನು ನೀಡಿ ಆಹಾರವನ್ನು ಕಾಯ್ದಿರಿಸಬಹುದು.
ಮಾತ್ರವಲ್ಲದೆ ಗ್ರಾಹಕರು ಕುಳಿತಲ್ಲಿಗೇ ಅದನ್ನು ಪೂರೈಸಲಾಗುತ್ತದೆ. ಪ್ರಮುಖ ರೇಲ್ವೆ ನಿಲ್ದಾಣಗಳಲ್ಲಿರುವ ರೆಸ್ಟೋರೆಂಟ್ಗಳಲ್ಲಿರುವ ಆಹಾರವನ್ನು ಆಯ್ಕೆ ಮಾಡಿ ಬುಕ್ ಮಾಡಲೂ ಇಲ್ಲಿ ವ್ಯವಸ್ಥೆ ಇದೆ.
ಏರ್ಟೆಲ್, ಟಾಟಾ ಡೊಕೊಮೆ, ಐಡಿಯಾದಂಥ ಪ್ರಮುಖ ಮೊಬೈಲ್ ಸಂಸ್ಥೆಗಳಲ್ಲಿ ಈ ಸೇವೆ ಲಭ್ಯವಿದೆ. ಜತೆಗೆ ದೇಶದ ಒಂದು ಸಾವಿರ ನಗರಗಳು ಮತ್ತು ಪಟ್ಟಣಗಳಲ್ಲಿ ಈ ಸೇವೆ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ www.travelkhana.com/home ಸಂಪರ್ಕಿಸಿ.