ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಭಾರತ ತೆರಿಗೆದಾರರ ಸ್ವರ್ಗವಲ್ಲ, ಬಾಕಿ ಪಾವತಿಸಿ

`ನ್ಯಾಯಬದ್ಧವಾದ ತೆರಿಗೆ ಬೇಡಿಕೆಯನ್ನು `ತೆರಿಗೆ ಭಯೋತ್ಪಾದನೆ' ಎಂದು ಪರಿಗಣಿಸಲಾಗದು. ಏಕೆಂ ದರೆ ಭಾರತವೇನೂ ತೆರಿಗೆದಾರರ...

ಅರುಣ್ ಜೇಟ್ಲಿ
Rashmi Kasaragodu
Updated On : 7 Apr 2015, 12:18 pm

ನವದೆಹಲಿ: `ನ್ಯಾಯಬದ್ಧವಾದ ತೆರಿಗೆ ಬೇಡಿಕೆಯನ್ನು `ತೆರಿಗೆ ಭಯೋತ್ಪಾದನೆ' ಎಂದು ಪರಿಗಣಿಸಲಾಗದು. ಏಕೆಂ ದರೆ ಭಾರತವೇನೂ ತೆರಿಗೆದಾರರ ಸ್ವರ್ಗವಲ್ಲ.' ಸುಮಾರು 100 ವಿದೇಶಿ ಸಾಂಸ್ಥಿಕ ಹೂಡಿಕೆ(ಎಫ್ ಐಐ)ದಾರರಿಗೆ ತೆರಿಗೆ ನೋಟಿಸ್ ಕಳುಹಿಸಿದ ಸರ್ಕಾರದ ನಿರ್ಧಾರವನ್ನು ಕೇಂದ್ರ ಸಚಿವ ಅರುಣ್ ಜೇಟ್ಲಿ ಈ ರೀತಿ ಸಮರ್ಥಿಸಿಕೊಂಡಿದ್ದಾರೆ.

 ಭಾರತ ದುರ್ಬಲ ರಾಷ್ಟ್ರವಲ್ಲ: ನವದೆಹಲಿಯಲ್ಲಿ ಸೋಮವಾರ ಮಾತನಾಡಿದ ಸಚಿವ ಜೇಟ್ಲಿ, ತೆರಿಗೆ ಪಾವತಿಸದ ಎಫ್ಐಐಗಳ ವಿರುದ್ಧ  ಸ್ವಲ್ಪ ಖಡಕ್ ಎಂಬಂತೆಯೇ  ಪ್ರತಿಕ್ರಿಯಿಸಿ ದ್ದಾರೆ. ನ್ಯಾಯಬದ್ಧವಾಗಿ ಕೇಳುವ ತೆರಿಗೆಯನ್ನೂ `ತೆರಿಗೆ ಭಯೋ ತ್ಪಾದನೆ' ಎಂದು ಹೇಳಲು ಭಾರತವೇನೂ ದುರ್ಬಲ ರಾಷ್ಟ್ರವಲ್ಲ. ನಾವು ತೆರಿಗೆಗಳ್ಳರಿಗೆ ಆಶ್ರಯ ನೀಡುವವರೂ ಅಲ್ಲ, ಹಾಗಾಗಲು ಬಯಸುವುದೂ ಇಲ್ಲ. ಯಾವ ತೆರಿಗೆಯನ್ನುಪಾವತಿಸಬೇಕೋ ಅದನ್ನು ಪಾವತಿಸಲೇ ಬೇಕು ಎಂದಿದ್ದಾರೆ ಜೇಟ್ಲಿ. ಭಾನುವಾರವಷ್ಟೇ ಆದಾಯ ತೆರಿಗೆ ಇಲಾಖೆಯು ರು. 300-400 ಕೋಟಿ ತೆರಿಗೆ ಬಾಕಿ ಉಳಿಸಿದ ಎಫ್ ಐಐಗಳಿಗೆ ನೋಟಿಸ್ ಜಾರಿ ಮಾಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement