ವಾಣಿಜ್ಯ

ವಿಪ್ರೋದ ಅತ್ಯುನ್ನತ ಹುದ್ದೆಗೆ ಸನಿಹವಾದ ಪ್ರೇಮ್ ಜಿ ಜೂನಿಯರ್

Guruprasad Narayana

ಬೆಂಗಳೂರು: ಮಾಹಿತಿ ತಂತ್ರಜ್ಞಾನ ಸೇವೆಗಳ ದೈತ್ಯ ವಿಪ್ರೋ ವಾರಸುದಾರ ರಿಷದ್ ಪ್ರೇಮ್ ಜಿ ಅವರನ್ನು ಮೇ ೧ ರಿಂದ ಸಂಪೂರ್ಣ ಸಮಯದ ನಿರ್ದೇಶಕರ ಸಮಿತಿಗೆ ಸೇರಿಸಿ ಬಡ್ತಿ ನೀಡಿದೆ.

"ಸಮಿತಿಗೆ ಒಬ್ಬರನ್ನು ಸೇರಿಸಿ ಶೇರುದಾರಾರ ಹಿತಾಸಕ್ತಿಗಳನ್ನು ಕಾಯಲು ನಮ್ಮ ಸಂಸ್ಥೆ ಸದಾ ಬದ್ಧವಾಗಿತ್ತು. ಈಗ ಆ ಸ್ಥಾನವನ್ನು ರಿಷದ್ ತುಂಬಿದ್ದಾರೆ.

"ವಿಪ್ರೋ ನಿರ್ದೇಶಕರ ತಂಡದ ಪ್ರಮುಖ ವ್ಯಕ್ತಿ ಅವರು" ಎಂದು ವಿಪ್ರೋದ ಸಿಇಒ ಟಿ ಕೆ ಕುರಿಯನ್ ಸಂಸ್ಥೆಯ ತೈಮಾಸಿಕ ಲಾಭವನ್ನು ಮಂಗಳವಾರ ಘೋಷಿಸುವ ಸಮಯದಲ್ಲಿ ತಿಳಿಸಿದ್ದಾರೆ.

ವಿಪ್ರೋ ಅಧ್ಯಕ್ಷ ಆಜಿಂ ಪ್ರೇಮ್ ಜಿ ಅವರ ಪುತ್ರ ರಿಷದ್ ಅವರು ಸಂಸ್ಥೆಯನ್ನು ಮುನ್ನಡೆಸಲಿದ್ದಾರೆ ಎಂದು ಹಿಂದಿನಿಂದಲೂ ಊಹಿಸಲಾಗಿತ್ತು. ಈಗ ಈ ಬಡ್ತಿ ರಿಷದ್ ಅವರನ್ನು ದೇಶದ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಒಂದಾದ ವಿಪ್ರೋ ಸಂಸ್ಥೆಯ ಅತ್ಯುನ್ನತ ಹುದ್ದೆಯ ಸನಿಹಕ್ಕೆ ಕೊಂಡೊಯ್ದಿದೆ.

ರಷೀದ್ ಅವರ ಬದಲಾದ ಪಾತ್ರದ ಬಗ್ಗೆ ಪ್ರಶ್ನಿಸಿದಾಗ "ಏನೂ ಬದಲಾವಣೆಗಳಾಗಿಲ್ಲ. ಮಾಮೂಲಿನಂತೆಯೇ ಮುಂದುವರೆಯಲಿದೆ. ಇದರಲ್ಲಿ ಹೆಚ್ಚಿನದು ಊಹಿಸುವ ಅವಶ್ಯಕತೆ ಇಲ್ಲ. ಅವರು ಶೇರುದಾರ ಹಿತಾಸಕ್ತಿಗಳನ್ನು ಪ್ರತಿನಿಧಿಸಲಿದ್ದಾರೆ" ಎಂದು ಕುರಿಯನ್ ತಿಳಿಸಿದ್ದಾರೆ.

ಅಜೀಜ್ ಪ್ರೇಮ್ ಜಿ ಫೌಂಡೇಶನ್ನಿನ ಬೋರ್ಡ್ ಸದಸ್ಯರೂ ಆಗಿರುವ ರಿಷದ್, ೨೦೦೭ರಲ್ಲಿ ವಿಪ್ರೋ ಸಂಸ್ಥೆ ಸೇರಿದಾಗಿನಿಂದಲೂ ಹಂತಹಂತವಾಗಿ ಮೇಲೇರಿ ಬರುತ್ತಿದ್ದಾರೆ. ಹಾರ್ವಾರ್ಡ್ ನಿಂದ ಎಂಬಿಎ ಪದವೀಧರ ರಿಷದ್.

ಕೊನೆಯ ತ್ರೈಮಾಸಿಕ ಲಾಭ ೨.೧% ಹೆಚ್ಚಳ


೨೦೧೪-೧೫ರ ಕೊನೆಯ ತೈಮಾಸಿಕದ ನಿವ್ವಳ ಲಾಭ ೨.೧% ಏರಿಕೆ ಕಂಡಿದೆ ಎಂದು ವಿಪ್ರೋ ಸಂಸ್ಥೆ ಮಂಗಳವಾರ ಘೋಷಿಸಿದೆ.

SCROLL FOR NEXT