ಮುಂಬೈ: ಭಾರತದ ವಿಮಾನಯಾನ ಸಂಸ್ಥೆ ಜೆಟ್ ಏರವೇಸ್ ಮತ್ತು ಥೈಲ್ಯಾಂಡ್ ಮೂಲದ ಪ್ರಾದೇಶಿಕ ವಿಮಾನಯಾನ ಸಂಸ್ಥೆ ಬ್ಯಾಂಕಾಕ್ ಏರ್‌ವೇಸ್ ಕೋಡ್‌ಶೇರ್ ಒಪ್ಪಂದಕ್ಕೆ ಸಹಿ ಹಾಕಿವೆ.
ಈ ಕೋಡ್‌ಶೇರ್ ಒಪ್ಪಂದದ ಪ್ರಕಾರ, ಜೆಟ್ ಏರ್‌ವೇಸ್ ಮುಂಬೈ-ಬ್ಯಾಂಕಾಕ್ ನಡುವೆ ಸಂಚರಿಸುವ ಬ್ಯಾಂಕಾಕ್ ಏರ್‌ವೇಸ್ ವಿಮಾನಗಳ ಮೇಲೆ ತನ್ನ ಮಾರುಕಟ್ಟೆ ಕೋಡ್ ಅನ್ನು ಬಳಸಬಹುದು ಮತ್ತು ಬ್ಯಾಂಕಾಕ್ ಏರ್‌ವೇಸ್ ಸಹ ತನ್ನ ಮಾರುಕಟ್ಟೆ ಕೋಡ್ ಅನ್ನು ಜೆಟ್ ಏರ್‌ವೇಸ್ ವಿಮಾನಗಳಿಗೆ ಬಳಸಬಹುದಾಗಿದೆ.
ಈ ಒಪ್ಪಂದದಿಂದಾಗಿ ಭಾರತ ಮತ್ತು ಥೈಲ್ಯಾಂಡ್ ಪ್ರಯಾಣಿಕರಿಗೆ ಹೆಚ್ಚಿನ ಆಯ್ಕೆಗಳು ದೊರೆಯಲಿವೆ. ಥೈಲ್ಯಾಂಡ್‌ನಲ್ಲಿ ತನ್ನ ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ವಿಸ್ತರಿಸುವ, ಪ್ರಯಾಣಿಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಜೆಟ್ ಏರ್‌ವೇಸ್ ಮುಖ್ಯ ವಾಣಿಜ್ಯ ಅಧಿಕಾರಿ ರಾಜ್ ಶಿವಕುಮಾರ್ ಅವರು ಹೇಳಿದ್ದಾರೆ.