ಸಾಂದರ್ಭಿಕಿ ಚಿತ್ರ 
ವಾಣಿಜ್ಯ

ಚಿನ್ನ ರು.200 ಏರಿಕೆ

ಕಳೆದ ಕೆಲವು ದಿನಗಳಿಂದ ಸತತ ಕುಸಿತ ಕಂಡಿದ್ದ ಚಿನ್ನ ಶನಿವಾರದ ವಹಿವಾಟಿನಲ್ಲಿ ಏರಿಕೆ ದಾಖಲಿಸಿದೆ. ಜಾಗತಿಕ...

ನವದೆಹಲಿ: ಕಳೆದ ಕೆಲವು ದಿನಗಳಿಂದ ಸತತ ಕುಸಿತ ಕಂಡಿದ್ದ ಚಿನ್ನ ಶನಿವಾರದ ವಹಿವಾಟಿನಲ್ಲಿ ಏರಿಕೆ ದಾಖಲಿಸಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಏರಿಕೆ ಕಂಡಿದ್ದ ರಿಂದ ಹಾಗೂ ಆಭರಣ ತಯಾರಕರು ಖರೀದಿಯಲ್ಲಿ ತೊಡಗಿದ್ದರಿಂದ ಪ್ರತಿ ಹತ್ತು ಗ್ರಾಂ ದರ ರು.200 ಏರಿಕೆ ಕಂಡು ರು.25,300ಕ್ಕೆ ತಲುಪಿದೆ.

ಬೆಳ್ಳಿ ದರ ಸಹ ರು.300 ಏರಿಕೆ ಕಂಡು ರು.34,300ಕ್ಕೆ ತಲುಪಿದೆ. ಅಮೆರಿಕದ ಉದ್ಯೋಗ ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಗತಿ ಕಾಣದಿರುವುದರಿಂದ ಫೆಡ ರಲ್ ಬ್ಯಾಂಕ್ ಬಡ್ಡಿದರಗಳನ್ನು ಹೆಚ್ಚಿಸುವ ಸಾಧ್ಯತೆಗಳು ಕಡಿಮೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಹೂಡಿಕೆದಾರರು ಮತ್ತೆ ಚಿನ್ನದ ಮಾರುಕಟ್ಟೆಯತ್ತ ಮುಖ ಮಾಡಿದರು.

ಮತ್ತೊಂದು ಕಡೆ ಆಭರಣ ತಯಾರಕರು ಹೆಚ್ಚಿನ ಖರೀದಿಯಲ್ಲಿ ತೊಡಗಿದ್ದು ದರ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಪ್ರತಿ ಔನ್ಸ್ ದರ ಶೇ.0.6ರಷ್ಟು ಏರಿಕೆ ಕಂಡು 1,095 ಡಾಲರ್‍ಗೆ ತಲುಪಿದರೆ ಬೆಳ್ಳಿ ಪ್ರತಿ ಔನ್ಸ್ ದರ ಶೇ.0.3ರಷ್ಟು ಏರಿಕೆ ಕಂಡು 14.74 ಡಾಲರ್‍ಗೆ ತಲುಪಿದೆ.
ಹಾಗಿದ್ದರೂ ಚಿನ್ನದ ಗಟ್ಟಿ ದರ ಪ್ರತಿ ಎಂಟು ಗ್ರಾಂ ದರ ರು.22,200 ಇತ್ತು. ಬೆಳ್ಳಿ ನಾಣ್ಯಗಳ ಗ್ರಾಹಕರಿಂದ ಖರೀದಿ ದರ ರು.49 ಸಾವಿರ ಇದ್ದರೆ ಮಾರಾಟ ದರ ರು.48 ಸಾವಿರ ಇತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT