ಮರ್ಸಿಡೀಸ್ ಬೆನ್ಜ್ 
ವಾಣಿಜ್ಯ

ಭಾರತದ ಮರ್ಸಿಡೀಸ್ ಬೆನ್ಜ್ ಘಟಕಕ್ಕೆ ನೂತನ ಎಂ.ಡಿ ನೇಮಕ

ಜರ್ಮನಿಯ ಅಟೋಮೊಬೈಲ್ ಉತ್ಪಾದಕ ಮರ್ಸಿಡೀಸ್ ಬೆನ್ಜ್ ಕಂಪನಿ ಭಾರತದ ಘಟಕಕ್ಕೆ ನೂತನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕರನ್ನು ನೇಮಿಸಿದೆ.

ಪುಣೆ: ಜರ್ಮನಿಯ ಅಟೋಮೊಬೈಲ್ ಉತ್ಪಾದಕ ಮರ್ಸಿಡೀಸ್ ಬೆನ್ಜ್ ಕಂಪನಿ ಭಾರತದ ಘಟಕಕ್ಕೆ ನೂತನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕರನ್ನು ನೇಮಿಸಿದೆ. ರೊನಾಲ್ಡ್ ಎಸ್. ಫೋಲ್ಜರ್ ಅಕ್ಟೋಬರ್.1 ರಿಂದ ಮರ್ಸಿಡೀಸ್ ಬೆನ್ಜ್ ನ  ಭಾರತದ ಶಾಖೆಯ  ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ರೊನಾಲ್ಡ್ ಎಸ್. ಫೋಲ್ಜರ್,  ಮರ್ಸಿಡಿಸ್ ಬೆನ್ಜ್ ನ ಮಲೇಷಿಯಾ ಶಾಖೆಯ ಹಾಲಿ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಭಾರತದ ಹಾಲಿ ಎಂಡಿ ಎಬರ್ಹಾರ್ಡ್ ಕೆರ್ನ್ ಅವರಿಗೆ ಯುರೋಪ್ ನ ಮಾರುಕಟ್ಟೆಯ ವ್ಯವಸ್ಥಾಪಕರನ್ನಾಗಿ ನೇಮಿಸಲಾಗಿದೆ.

2012 ರಿಂದ 2015 ರಲ್ಲಿ ಕಾರುಗಳ ಮಾರಾಟ ದ್ವಿಗುಣವಾಗಿದ್ದು ಭಾರತದಲ್ಲಿ ಮರ್ಸಿಡೀಸ್ ಬೆನ್ಜ್ ನ ಅಪಾರ ಅಭಿವೃದ್ಧಿ ಸಮಾಧಾನಕರವಾಗಿದೆ ಎಂದು ಭಾರತದ ಎಂಡಿಯಾಗಿ ಸದ್ಯದಲ್ಲೇ ನಿರ್ಗಮಿಸಲಿರುವ ಕೆರ್ನ್ ಹೇಳಿದ್ದಾರೆ.

ಕೆರ್ನ್ ಅಧಿಕಾರಾವಧಿಯ ಮೂರು ವರ್ಷಗಳಲ್ಲಿ  ಉತ್ಪಾದನಾ ಸಾಮರ್ಥ್ಯ, ಸ್ಥಳೀಯ ನೆಟ್ವರ್ಕ್, ಹಾಗೂ ಉತ್ಪನ್ನಗಳ ಮಾರಾಟ ಹೆಚ್ಚಾಗಿವೆ ಎಂದು ಮರ್ಸಿಡೀಸ್ ಬೆನ್ಜ್ ತಿಳಿಸಿದೆ. 2014 ರಲ್ಲಿ ಕಂಪನಿಯ ಕಾರುಗಳ ಮಾರಾಟ 5 ಅಂಕಿಗಳನ್ನು ದಾಟಿ ಇತಿಹಾಸ ನಿರ್ಮಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT