ನವದೆಹಲಿ: ಅಧಿಕಾರಿಗಳು ತಮ್ಮ ಯೂಸರ್-ಐಡಿ ಮತ್ತು ಪಾಸ್‍ವರ್ಡ್ ಅನ್ನು ಅನಧಿಕೃತ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳದಂತೆ ಆಗಾಗ್ಗೆ ದಿಢೀರ್ ತಪಾಸಣೆ ನಡೆಸಬೇಕು ಎಂದು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಮತ್ತು ವಿಮಾ ಕಂಪನಿಗಳ ಜಾಗೃತ ಅಧಿಕಾರಿಗಳಿಗೆ ಕೇಂದ್ರ ಜಾಗೃತ ಆಯೋಗ(ಸಿವಿಸಿ) ಸೂಚಿಸಿದೆ.
ಬ್ಯಾಂಕಿಂಗ್, ವಿಮೆ, ಕೇಂದ್ರ ಸರ್ಕಾರಿ ವಲಯದ ಸಂಸ್ಥೆಗಳು ಮತ್ತು ಇತರೆಕ್ಷೇತ್ರಗಳು ಕಂಪ್ಯೂಟರೀಕೃತ ವಾತಾವರಣದಲ್ಲಿ ಕಾರ್ಯ ನಿರ್ವಹಿಸುತ್ತವೆ. ಇಲ್ಲಿ ಅಧಿಕಾರಿಗಳು ತಮ್ಮ ಯೂಸರ್ ಐಡಿ ಮತ್ತು ಪಾಸ್‍ವರ್ಡ್‍ಗಳನ್ನು ಅನಧಿಕೃತ ವ್ಯಕ್ತಿಗಳೊಂದಿಗೆ ಹಂಚಿ ಕೊಂಡಾಗ, ವಂಚನೆ ನಡೆಯುವ ಸಾಧ್ಯತೆಯಿರುತ್ತದೆ. ಆ ಅಧಿಕಾರಿ ವರ್ಗಾವಣೆಯಾದರೂ, ನಿವೃತ್ತಿ ಹೊಂದಿದರೂ, ಅಮಾನತಾದರೂಅಥವಾ ದೀರ್ಘಕಾಲದ ರಜೆಯಲ್ಲಿ ಹೋದರೂ ಯೂಸರ್ ಐಡಿ, ಪಾಸ್ ವರ್ಡ್‍ಗಳನ್ನು ಡಿಸೇಬಲ್ ಮಾಡಿರುವುದಿಲ್ಲ. ಹೀಗಾಗಿ ಅವರ ಪಾಸ್‍ವರ್ಡ್‍ಗಳನ್ನು ಅನಧಿಕೃತ ವ್ಯಕ್ತಿಗಳು ದುರುಪಯೋಗ ಪಡಿಸಿಕೊಳ್ಳುತ್ತಾರೆ ಎಂದು ಸಿವಿಸಿ ಹೇಳಿದೆ. ಈ ಹಿನ್ನೆಲೆಯಲ್ಲಿ ಸಲಹೆ ನೀಡಿರುವ ಸಿವಿಸಿ, ಅಧಿಕಾರಿಗಳು ಆಗಾಗ ಪಾಸ್ ವರ್ಡ್‍ಗಳನ್ನು ಬದಲಿಸುತ್ತಿರಬೇಕು. ಜತೆಗೆ, ದಿಢೀರ್ ತಪಾಸಣೆ ನಡೆಸಿ ಯಾರಾದರೂ ತಮ್ಮ ಪಾಸ್‍ವರ್ಡ್ ಗಳನ್ನು ಬೇರೆಯವರೊಂದಿಗೆ ಹಂಚಿ ಕೊಂಡಿದ್ದಾರೆಯೇ ಎಂಬುದನ್ನು
ತಿಳಿಯುವ ಕೆಲಸವಾಗಬೇಕು ಎಂದು ಹೇಳಿದೆ.