ಆಸ್ಟ್ರೇಲಿಯಾದ ಸಚಿವರೊಂದಿಗೆ ಗೌತಮ್ ಅದಾನಿ ( ಸಂಗ್ರಹ ಚಿತ್ರ) 
ವಾಣಿಜ್ಯ

ಅದಾನಿ ಯೋಜನೆಗೆ ಹಿನ್ನಡೆ

ಆಸ್ಟ್ರೇಲಿಯಾದಲ್ಲಿ ವಿಶ್ವ ದಲ್ಲೇ ಅತಿದೊಡ್ಡ ಕಲ್ಲಿದ್ದಲು ಗಣಿಯನ್ನು ಸ್ಥಾಪಿಸಬೇಕೆಂಬ ಭಾರತದ ಅತಿದೊಡ್ಡ ಗಣಿ ಕಂಪನಿಗಳಲ್ಲಿ ಒಂದಾದ ಅದಾನಿ...

ಮೆಲ್ಬೋರ್ನ್: ಆಸ್ಟ್ರೇಲಿಯಾದಲ್ಲಿ ವಿಶ್ವ ದಲ್ಲೇ ಅತಿದೊಡ್ಡ ಕಲ್ಲಿದ್ದಲು ಗಣಿಯನ್ನು ಸ್ಥಾಪಿಸಬೇಕೆಂಬ ಭಾರತದ ಅತಿದೊಡ್ಡ ಗಣಿ ಕಂಪನಿಗಳಲ್ಲಿ ಒಂದಾದ ಅದಾನಿ ಯೋಜನೆಗೆ ಹಿನ್ನಡೆಯಾಗಿದೆ. ಇಲ್ಲಿನ ಕ್ವೀನ್ಸ್‍ಲ್ಯಾಂಡ್‍ನಲ್ಲಿ 1,650 ಕೋಟಿ ಡಾಲರ್ ಹೂಡಿಕೆಯೊಂದಿಗೆ ಗಣಿ ಸ್ಥಾಪಿಸಲು ಮುಂದಾಗಿತ್ತು. ಈ ಪ್ರದೇಶದಲ್ಲಿ ಗಣಿಗಾರಿಕೆಯಿಂದ ವಿನಾಶದ ಅಂಚಿನಲ್ಲಿರುವ ಯಕ್ಕಾ ಸ್ಕಿಂಕ್ ಮತ್ತು ಆರ್ನಮೆಂಟಲ್ ಸ್ನೇಕ್ ಎಂಬ ಎರಡು ಪ್ರಬೇಧಗಳು ನಾಶವಾಗಲಿದೆ. ಹೀಗಾಗಿ ನಿರಾಕ್ಷೇಪಣಾ ಪತ್ರ ನೀಡಬಾರದೆಂದು ಇಲ್ಲಿನ ಪರಿಸರ ಸಂಘಟನೆ ಮ್ಯಾಕೆ ಕನ್ಸರ್ವೇ ಷನ್ ಗ್ರೂಪ್ ಮತ್ತು ಸ್ಥಳೀಯರು ಕೋರ್ಟ್ ಮೆಟ್ಟಿಲೇರಿದ್ದರು.
ಈ ಕುರಿತ ಮೇಲ್ಮನವಿ ವಿಚಾರಣೆ ನಡೆಸಿದ ಫೆಡರಲ್ ನ್ಯಾಯಾಲಯ ಕಂಪನಿಗೆ ನೀಡಿರುವ ಪರವಾನಗಿ ರದ್ದುಗೊಳಿಸಿದೆ. ಅದಾನಿ ಕಂಪನಿಗೆ ನೀಡಿರುವ ಪರವಾನಗಿ ಕುರಿತು ಪರಿಸರ ಸಚಿವಾಲಯ ಮಂಡಿಸಿರುವ ವಾದದಲ್ಲಿ ಹುರುಳಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಕಂಪನಿಗೆ ಪರವಾನಗಿ ನೀಡಿರುವುದು ತಾಂತ್ರಿಕ ಮತ್ತು
ಆಡಳಿತಾತ್ಮಕ ವಿಷಯವಾಗಿದೆ. ಹೀಗಾಗಿ ಪರವಾನಗಿ ನೀಡಿರುವ ನಿರ್ಧಾರದ ಕುರಿತು ಮರು ಪರಿಶೀಲಿಸಲು ನ್ಯಾಯಾಲಯ ಸೂಚಿಸಿದೆ. ಇದರಿಂದ ಇಡೀ ಪ್ರಕ್ರಿಯೆಯನ್ನೇ ಮರು ಪರಿಶೀಲಿಸುವ ಅಗತ್ಯವಿಲ್ಲ ಎಂದು ಆಸ್ಟ್ರೇಲಿಯಾದ ಪರಿಸರ ಇಲಾಖೆ ಹೇಳಿದೆ. ಸರ್ಕಾರದ ಅನುಮೋದನೆಗಾಗಿ ಕಾದಿದ್ದ ಅದಾನಿ ಕಂಪನಿ ಗಣಿಗಾರಿಕೆಗೆ ಸಂಬಂಧಿಸಿದಂತೆ ಆ ಪ್ರದೇಶದಲ್ಲಿ ಅಲ್ಲಲ್ಲಿ ಕಾಮಗಾರಿಗಳನ್ನು ಸ್ಥಗಿತಗೊಳಿತ್ತು. ಈಗ
ಕೋರ್ಟ್ ತೀರ್ಪಿನ ಕುರಿತು ಪ್ರತಿಕ್ರಿಯಿಸಿರುವ ಕಂಪನಿ ಇದು ಕಾನೂನು ತಾಂತ್ರಿಕ ಸಮಸ್ಯೆಯಷ್ಟೆ, ಮುಂದಿನ ದಿನಗಳಲ್ಲಿ ಇದು ನಿವಾರಣೆಯಾಗಲಿದೆ
ಎಂಬ ವಿಶ್ವಾಸ ವ್ಯಕ್ತಪಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ