ವಾಣಿಜ್ಯ

ಚಿನ್ನದ ದರ ಇಳಿಕೆ

Srinivas Rao BV

ನವದೆಹಲಿ: ಚಿನ್ನದ ದರ ಸತತ ನಾಲ್ಕನೆ ದಿನ ಇಳಿಕೆ ಕಂಡಿವೆ. ಗುರುವಾರದ ವಹಿವಾಟಿನಲ್ಲಿ ಪ್ರತಿ 10 ಗ್ರಾಂ ಚಿನ್ನದ ದರ ರೂ 40 ಇಳಿಕೆ ಕಂಡು ರೂ 24,980ಕ್ಕೆ ತಲುಪಿದೆ. ಇದು ಕಳೆದ ನಾಲ್ಕು ವರ್ಷ ಗಳಲ್ಲೇ ಚಿನ್ನದ ಕನಿಷ್ಠ ದರವಾಗಿದೆ. ಜಾಗತಿಕ ಮಾರುಕಟ್ಟೆಗಳಲ್ಲಿನ ಪರಿಸ್ಥಿತಿ ಇನ್ನೂ ಶೋಚನೀಯವಾಗಿದ್ದು ಐದು ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕಿಳಿದಿದೆ.

ದರಗಳು ಮತ್ತಷ್ಟು ಕುಸಿಯುವ ಸಾಧ್ಯತೆಗಳಿವೆ ಎಂದು ರಿಟೇಲ್ ವರ್ತಕರು ಖರೀದಿಗೆ ಮುಂದಾಗುತ್ತಿಲ್ಲ. ಆಭರಣ ತಯಾರಕರು ಸಹ ಚಿನ್ನ ಖರೀದಿ ಯಿಂದ ವಿಮುಖರಾಗಿದ್ದಾರೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.

ಆದರೂ ಬೆಳ್ಳಿ ತುಸು ಏರಿಕೆ ದಾಖಲಿಸಿದೆ. ಕೈಗಾರಿಕೆಗಳಲ್ಲಿ ಬಳಕೆಗಾಗಿ ಉದ್ಯಮಿಗಳು ಬೆಳ್ಳಿ ಖರೀದಿಯಲ್ಲಿ ತೊಡಗಿದ್ದರಿಂದ ಕೆಜಿ ದರ ರೂ100 ಏರಿಕೆ ಕಂಡು ರೂ33,800ಕ್ಕೆ ತಲುಪಿತು. ಅಮೆರಿಕದ ಡಾರಲ್ ಬ್ಯಾಂಕ್ ಬಡ್ಡಿದರಗಳನ್ನು ಹೆಚ್ಚಿಸಲಿದೆ ಎಂಬ ನಿರೀಕ್ಷೆಗಳ ಮೇರೆಗೆ ಹೂಡಿಕೆದಾರರು ಡಾಲರ್ ಖರೀದಿಯಲ್ಲಿ ತೊಡಗಿದ್ದಾರೆ. ಇದರಿಂದ ಚಿನ್ನದ ದರಗಳು ಸತತವಾಗಿ ಇಳಿಮುಖ ಕಾಣುತ್ತಿದೆ. ಸೆಪ್ಟೆಂಬರ್‍ನಲ್ಲಿ ಅಮೆರಿಕ ಫೆಡರಲ್ ಬ್ಯಾಂಕ್ ಬಡ್ಡಿದರಗಳನ್ನು ಪರಿಷ್ಕರಿಸಲಿದೆ.

SCROLL FOR NEXT