ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಭಾರತದತ್ತ ಯುಎಇ ಉದ್ಯಮಿಗಳ ಪಯಣ

ಭಾರತದೊಂದಿಗಿನ ದ್ವಿಪಕ್ಷೀಯ ವಾಣಿಜ್ಯ ಮೈತ್ರಿ ಹೆಚ್ಚಿಸುವ ಉದ್ದೇಶದೊಂದಿಗೆ ಹೂಡಿಕೆ ಅವಕಾಶಗಳ ಕುರಿತು ಚರ್ಚಿಸಲು ಸಂಯುಕ್ತ ಅರಬ್ಒಕ್ಕೂಟ...

ದುಬೈ ಇಂಟರ್‍ನ್ಯಾಷನಲ್ ಫೈನಾನ್ಷಿಯಲ್ ಸೆಂಟರ್ (ಡಿಐಎಫ್ ಸಿ) (ಸಂಗ್ರಹ ಚಿತ್ರ)
Rashmi Kasaragodu
Updated On : 20 Aug 2015, 11:46 am

ದುಬೈ: ಭಾರತದೊಂದಿಗಿನ ದ್ವಿಪಕ್ಷೀಯ ವಾಣಿಜ್ಯ ಮೈತ್ರಿ ಹೆಚ್ಚಿಸುವ ಉದ್ದೇಶದೊಂದಿಗೆ ಹೂಡಿಕೆ ಅವಕಾಶಗಳ ಕುರಿತು ಚರ್ಚಿಸಲು ಸಂಯುಕ್ತ ಅರಬ್ಒಕ್ಕೂಟ (ಯುಎಇ) ಉದ್ಯಮಿಗಳ ನಿಯೋಗ ಭಾರತಕ್ಕೆ ಆಗಮಿಸಲಿದೆ.ದುಬೈ ಇಂಟರ್‍ನ್ಯಾಷನಲ್ ಫೈನಾನ್ಷಿಯಲ್ ಸೆಂಟರ್ (ಡಿಐಎಫ್ ಸಿ) ನಿಯೋಗ ಸೋಮವಾರ ಮುಂಬೈಗೆಆಗಮಿಸಲಿದ್ದು ನಾಲ್ಕು ದಿನ ಮಾತುಕತೆ ನಡೆಸಲಿದೆ. ದುಬೈ ಕುರಿತಂತೆ ಭಾರತಕ್ಕೆ ಪರಿಚಯಿಸುವ ಅಗತ್ಯವಿಲ್ಲ. ಆದರೆ ಹೊಸ ಮಾರುಕಟ್ಟೆ ಮತ್ತು ಹೂಡಿಕೆಅವಕಾಶಗಳ ಕುರಿತು, ವೇಗವಾಗಿಬೆಳೆಯುತ್ತಿರುವ ಆರ್ಥಿಕತೆ ಮತ್ತು ಖಾಸಗಿ ವಲಯದ ಕುರಿತು ಅರಿತುಕೊಳ್ಳುವ ಅಗತ್ಯವಿದೆ ಎಂದು ಡಿಐಎಫ್ ಸಿ ಉಪ ಸಿಇಒ ಆರಿಫ್ ಅಮಿರಿ ಹೇಳಿದ್ದಾರೆ.ಭಾರತಕ್ಕೆ ಬೆಳೆಯುವ ಅಪಾರಅವಕಾಶಗಳಿವೆ. ಈ ಪ್ರವಾಸ ಆರ್ಥಿಕ ಕೇಂದ್ರಗಳಾದ ಮುಂಬೈ ಮತ್ತು ದುಬೈ ನಡುವೆ ಹೊಸ ಸುಸ್ಥಿರ ಸಹಯೋಗ ರೂಪಿಸಲಿದೆ ಎಂದಿದ್ದಾರೆ.ಎರಡು ದಿನಗಳ ಹಿಂದಷ್ಟೇ ಪ್ರಧಾನಿನರೇಂದ್ರ ಮೋದಿ ಯುಎಇ ಪ್ರವಾಸ ಕೈಗೊಂಡು ಅಲ್ಲಿನ ಉದ್ಯಮಿಗಳನ್ನುಭಾರತದಲ್ಲಿ ಹೂಡಿಕೆಗೆ ಆಹ್ವಾನಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement