ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಹಿವಾಟು ಕುಸಿತ, ರುಪಾಯಿ ಅಪಮೌಲ್ಯ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಗಗನಕ್ಕೇರುತ್ತಿದೆ.
ಕೆಲ ತಿಂಗಳುಗಳಿಂದ ಚಿನ್ನದಲ್ಲಿ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಹಿವಾಟು ಕುಸಿದ ಹಿನ್ನೆಲೆಯಲ್ಲಿ ಕಳೆದ 2-3 ದಿನಗಳಿಂದ ಚಿನ್ನದ ಬೆಲೆ ಗಣನೀಯವಾಗಿ ಏರಿಕೆಯಾಗುತ್ತಿದೆ.
ಇಂದು ಚಿನ್ನದ ಬೆಲೆಯಲ್ಲಿ 150 ರುಪಾಯಿ ಏರಿಕೆಯಾಗಿದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಸದ್ಯ 27,575 ರುಪಾಯಿಗೆ ಏರಿಕೆಯಾಗಿದೆ. ಚಿನ್ನದ ಬೆಲೆ ಕನಿಷ್ಠ ಬೆಲೆಗೆ ಬರುದನ್ನೇ ಕಾಯುತ್ತಿದ್ದ ಬಂಗಾರ ಪ್ರಿಯರಿಗೆ ಬಂಗಾರದ ಬೆಲೆ ಏರಿಕೆ ನಿರಾಸೆ ಮೂಡಿಸಿದೆ.