ವಾಣಿಜ್ಯ

ಸೆನ್ಸೆಕ್ಸ್ , ನಿಫ್ಟಿ ಕುಸಿಯಲು ಕಾರಣಗಳೇನು?

Rashmi Kasaragodu

ನವದೆಹಲಿ: ಮಂಗಳವಾರ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 700 ಅಂಕ ಹಾಗೂ ನಿಫ್ಟಿ ಶೇ.2 ಕ್ಕಿಂತ ಹೆಚ್ಚು ಕುಸಿತ ಕಂಡಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಈ ರೀತಿ ಕುಸಿಯಲು ಕಾರಣವೇನು ? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ

ನಿರೀಕ್ಷೆಗಿಂತ ಕಡಿಮೆ ಜಿಡಿಪಿ


ಕಳೆದ ತೈಮಾಸಿಕ ಅವಧಿಯಲ್ಲಿ ದೇಶದ ಒಟ್ಟಾರೆ ಆರ್ಥಿಕ ಅಭಿವೃದ್ಧಿಯ ದರ ನಿರೀಕ್ಷಿತ ಮಟ್ಟಕ್ಕಿಂತ ಕುಸಿದಿರುವುದೂ ಸೆನ್ಸೆಕ್ಸ್ ಕುಸಿತಕ್ಕೆ ಕಾರಣವಾಗಿದೆ.  ಕೇಂದ್ರ ಸಾಂಖ್ಯಿಕ ಸಂಸ್ಥೆ (ಸಿಎಸ್‌ಒ) ಸೋಮವಾರ ಪ್ರಕಟಿಸಿದ ಆಧಾರಾಂಶಗಳ ಪ್ರಕಾರ ಭಾರತದ ಆರ್ಥಿಕತೆ ಜೂನ್ ತಿಂಗಳ ತ್ರೈಮಾಸಿಕ ಅವಧಿಯಲ್ಲಿ ಶೇ.7 ರಷ್ಟು ಏರಿಕೆ ಕಂಡಿತ್ತು. ಆದರೆ ಅದಕ್ಕಿಂತ ಮೊದಲ ತ್ರೈಮಾಸಿಕ ಅವಧಿಯಲ್ಲಿ ಶೇ. 7.7 ಏರಿಕೆ ಕಂಡಿತ್ತು. ಅಂದಹಾಗೆ 2014-15ರ ಜೂನ್ ತಿಂಗಳ ತ್ರೈಮಾಸಿಕ ಅವಧಿಯಲ್ಲಿ ಏರಿಕೆ ಶೇ. 6.7 ಆಗಿತ್ತು.
ನಿರೀಕ್ಷಿತ ಏರಿಕೆ ದರ ಶೇ. 7 ಆಗಿತ್ತಾದರೂ ಜೂನ್ ತಿಂಗಳಲ್ಲಿ ಏರಿಕೆ ದರ ಅಷ್ಟರ ಮಟ್ಟಿಗೆ ತಲುಪಲಿಲ್ಲ.
ಆಗಸ್ಟ್ ತಿಂಗಳಲ್ಲೇ ವಿದೇಶಿ ಹೂಡಿಕೆದಾರರು ಭಾರತೀಯ ಷೇರುಗಳನ್ನು ಮಾರಿದ್ದರು.

ಚೀನಾದಲ್ಲಿ ಆರ್ಥಿಕ ಹಿಂಜರಿತದಿಂದಾಗಿ ವಿದೇಶಿ ಹೂಡಿಕೆದಾರರು ಆಗಸ್ಟ್ ತಿಂಗಳಲ್ಲೇ ಭಾರತೀಯ ಷೇರುಗಳನ್ನು ಮಾರಿದ್ದರು. ವಿದೇಶಿ ಹೂಡಿಕೆದಾರರು  ಆಗಸ್ಟ್ ತಿಂಗಳಲ್ಲಿ  168.77 ಬಿಲಿಯನ್ ರುಪಾಯಿ ಮೌಲ್ಯದ ಷೇರುಗಳನ್ನು ಮಾರಿದ್ದರು.

ಹೆಚ್‌ಡಿಎಫ್‌ಸಿಯಿಂದ ರೇಟ್ ಕಟ್

ಹೆಚ್‌ಡಿಎಫ್‌ಸಿ ಸೋಮವಾರ ಮೂಲ ದರದಲ್ಲಿ 35 ಬೇಸಿಸ್ ಪಾಯಿಂಟ್ ಕಡಿತಗೊಳಿಸಿದ್ದು ಸೆನ್ಸೆಕ್ಸ್ ಕುಸಿತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಚೀನಾದ ಆರ್ಥಿಕ ಹಿಂಜರಿತ

ಚೀನಾದಲ್ಲಿ ಆರ್ಥಿಕ ಹಿಂಜರಿತವು ಷೇರು ಮಾರುಕಟ್ಟೆಯನ್ನು ನಲುಗಿಸಿತ್ತು.


ಅಮೆರಿಕದಲ್ಲಿ ಬಡ್ಡಿದರದ ಅನಿಶ್ಚಿತತೆ

ಅಮೆರಿಕದಲ್ಲಿ ಬಡ್ಡಿದರದಲ್ಲಿನ ಅನಿಶ್ಚಿತತೆಯೂ ಸಂವೇದಿ ಸೂಚ್ಯಂಕ ಕುಸಿತಕ್ಕೆ ಕಾರಣವಾಗಿದೆ.


ಕಚ್ಛಾ ತೈಲದ ಬೆಲೆಯಲ್ಲಿ ಏರಿಕೆ

ಸೋಮವಾರ ತೈಲ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆಯಲ್ಲಿ ಏರಿಕೆ ಕಂಡು ಬಂದಿತ್ತು. ಈ ಏರಿಕೆಯೂ ಷೇರು ಮಾರುಕಟ್ಟೆಯ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರಿದೆ.

(ಮೂಲ: ಏಜೆನ್ಸಿ)

SCROLL FOR NEXT