ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ಮಾಯವಾದಂತಿರುವ 50 ಪೈಸೆ ನಾಣ್ಯ ಉತ್ಪಾದನೆಯಾಗುತ್ತಲೇ ಇದೆ.
ಅಷ್ಟೇ ಅಲ್ಲ, ನಾಣ್ಯಗಳ ಪೈಕಿ ಶೇ.14.90ರಷ್ಟು ಉತ್ಪಾದನಾ ಪ್ರಮಾಣ ಹೊಂದಿದೆ. ಮಾಹಿತಿ ಹಕ್ಕು ಕಾರ್ಯಕರ್ತ ಸುಭಾಷ್‍ಚಂದ್ರ ಅಗರ್‍ವಾಲ್ ಆರ್ ಟಿಐ ಅಡಿ ಪಡೆದ ಮಾಹಿತಿ ಪ್ರಕಾರ, ಐದು ವರ್ಷಗಳಿಂದ 50 ಪೈಸೆ ನಾಣ್ಯ ಬಳಕೆ ಪ್ರಮಾಣ ಬಹುತೇಕ ಸ್ಥಿರವಾಗಿದೆ. 2011-12ರಲ್ಲಿ 50 ಪೈಸೆ ಮೌಲ್ಯದ 14,785 ನಾಣ್ಯಗಳು ಚಲಾವಣೆಯಾಗಿವೆ. 2011-12ರಲ್ಲಿ ರು. 1 ಮುಖಬೆಲೆಯ 3,26,750 ನಾಣ್ಯಗಳನ್ನು ಟಂಕಿಸಲಾಗಿತ್ತು. ರು.1, ರು.2, ರು.5, ಮತ್ತು ರು.10 ಮುಖಬೆಲೆ ನಾಣ್ಯಗಳ ಬಳಕೆಯಂತೂ ನಿರಂತರವಾಗಿ ಏರಿಕೆ ದಾಖಲಿಸಿದೆ.
2014-15ರಲ್ಲಿ ಟಂಕಿಸಲಾದ ನಾಣ್ಯಗಳ ಪೈಕಿ ರು.1 ನಾಣ್ಯಗಳು ಶೇ.42.10, ರು.2 ನಾಣ್ಯಗಳು ಶೇ.27.30 ಹಾಗೂ ರು.10 ಮುಖಬೆಲೆಯ ನಾಣ್ಯಗಳ ಉತ್ಪಾದನೆ ಪ್ರಮಾಣ ಶೇ.2.80 ರಷ್ಟಿತ್ತು.