ನವದೆಹಲಿ: ಪ್ರಸಕ್ತ ದಶಕದಲ್ಲಿ ಭಾರತಕ್ಕೆ ಶೇ.9ರಷ್ಟು ಆರ್ಥಿಕ ಪ್ರಗತಿ ಸಾಧಿಸುವ ಸಾಮರ್ಥ್ಯವಿದೆ. ಮುಂದಿನ ದಶಕಗಳಲ್ಲಿಯೂ ಈ ಪ್ರಮಾಣ ಶೇ.8ರಂತೆ ಮುಂದುವರೆಯಲಿದೆ ಎಂದು ಪ್ರಸಿದ್ಧ ಅರ್ಥಿಕ ತಜ್ಞರಾದ ಹಾರ್ವರ್ಡ್ ಯೂನಿವರ್ಸಿಟಿಯ ಪ್ರೊಫೆಸರ್ ಲಾರೆನ್ಸ್ ಸಮ್ಮರ್ಸ್ ಹೇಳಿದ್ದಾರೆ.
ಹಿಂದೂಸ್ತಾನ್ ಟೈಮ್ಸ್ ಲೀಡರ್‍ಶಿಪ್ ಶೃಂಗದಲ್ಲಿ ಮಾತನಾಡಿದ ಅವರು, ಭಾರತ ಹೊರತುಪಡಿಸಿದರೆ ಪ್ರಮುಖ ಆರ್ಥಿಕ ದೇಶಗಳೆಲ್ಲ ಹಿನ್ನಡೆ ಕಾಣುತ್ತಿವೆ. ಇದಕ್ಕೆ ಭಾರತ ದಿಟ್ಟ ಸುಧಾರಣೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಎಂದಿದ್ದಾರೆ.
ಭಾರತ ಸುಧಾರಣಾ ಕ್ರಮಗಳನ್ನು ಕೇಂದ್ರ ಮಟ್ಟದಲ್ಲಿ ಮಾತ್ರವಲ್ಲ ರಾಜ್ಯಗಳ ಮಟ್ಟದಲ್ಲೂ ಕೈಗೊಳ್ಳಬೇಕು ಎಂದಿರುವ ಅವರು ಮುಂದಿನ ಐದು ವರ್ಷಗಳಲ್ಲಿ ಭಾರತ ಅತಿ ವೇಗವಾಗಿ ಪ್ರಗತಿ ಕಾಣುವ ಆರ್ಥಿಕ ದೇಶವಾಗಿರಲಿದೆ ಎಂದಿದ್ದಾರೆ.