ಮುಂಬೈ: ಸತತ ಐದನೇ ದಿನ ಮಂಗಳವಾರವೂ ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ ಕುಸಿದಿದೆ.
ಮಂಗಳವಾರದ ವಹಿವಾಟಿನಲ್ಲಿ 219.78 ಅಂಕ ಕುಸಿದ ಸೆನ್ಸೆಕ್ಸ್ 25,310.33 ಅಂಕಕ್ಕೆ ಕೊನೆಗೊಂಡಿತು. ಈ ಹಂತ ಕಳೆದ ಮೂರು ತಿಂಗಳಲ್ಲೇ ಕನಿಷ್ಠವಾಗಿದೆ. ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 63.70 ಅಂಕ ನಷ್ಟ ಕಂಡು 7,701.70 ಅಂಕ್ಕೆ ಕೊನೆಗೊಂಡಿತು.
ಸದ್ಯ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಜಿಎಸ್‍ಟಿ ಜಾರಿಯಾಗುವ ಕುರಿತು ಮೂಡಿರುವ ಅನುಮಾನಗಳು, ವಿದೇಶಿ ಹೂಡಿಕೆ ಸಂಸ್ಥೆಗಳು ಸತತವಾಗಿ ಬಂಡವಾಳ ಹಿಂಪಡೆಯುತ್ತಿರುವುದು ಮತ್ತು ರುಪಾಯಿ ಮೌಲ್ಯ ಇಳಿಮುಖ ಕಾಣುತ್ತಿರುವುದರಿಂದ ಹೂಡಿಕೆದಾರರು ಹೆಚ್ಚಿನ ಮಾರಾಟದಲ್ಲಿ ತೊಡಗಿದ್ದರು.