ಮುಂಬೈ: ತಂತ್ರಜ್ಞಾನ, ಡಿಜಟಲೀಕರಣ ಹೆಚ್ಚುತ್ತಿರುವುದರಿಂದ ಸ್ಮಾರ್ಟ್‍ಹೋಮï ಗಳ ಪರಿಕಲ್ಪನೆ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದೆ.
ಇದರಿಂದ ವರ್ಷದಿಂದ ವರ್ಷಕ್ಕೆ ಶೇ.30ರಷ್ಟು ಪ್ರಗತಿ ಕಾಣುವ ಸಾಧ್ಯತೆಗಳಿವೆ ಎಂದು ನೇಡರ್ ಎಲೆಕ್ಟ್ರಿಕ್ ಇಂಡಿಯಾ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ. ಸ್ಮಾಟ್ರ್ ಹೋಮ್ ಗಳೆಂದರೆ ಸಂಪೂರ್ಣ ಆಟೋಮ್ಯಾಟಿಕ್ ಆಗಿರುತ್ತವೆ.
ವಿವಿಧ ರೀತಿಯ ಎಲೆಕ್ಟ್ರಿಕಲ್ ಸಂಪರ್ಕಗಳು, ಫಂಕ್ಷನ್‍ಗಳು, ವೈಫೈಮತ್ತಿತರ ಡಿಜಿಟಲ್ ಸೌಲಭ್ಯಗಳಿರುತ್ತವೆ. ಮನೆಯಲ್ಲಿನ ಎಲ್ಲ ಪ್ರಕ್ರಿಯೆಗಳನ್ನು ಸ್ಮಾರ್ಟ್‍ಫೋನ್ ಅಥವಾ ಕಂಪ್ಯೂಟರ್ ಮೂಲಕ ನಿಯಂತ್ರಿಸಲಾಗುವುದು.
ಮಹಾನಗರಗಳು ಮತ್ತು ಹೆಚ್ಚು ಆದಾಯ ಇರುವವರು ಹೆಚ್ಚು ಆಸಕ್ತಿ ತೋರುತ್ತಿರುವುದರಿಂದ ಸ್ಮಾರ್ಟ್‍ಹೋಮ್ ಗಳಿಗೆ ಬೇಡಿಕೆ ಹೆಚ್ಚುತ್ತಿದೆ ಎಂದು ಸಮೀಕ್ಷೆ ವಿವರಿಸಿದೆ.