ವಾಣಿಜ್ಯ

ಕಾರು ದರಗಳು ಏರಿಕೆ

Mainashree
ನವದೆಹಲಿ: ನಿಸಾನ್, ರೀನೊ ಮತ್ತು ಸ್ಕೋಡಾ ಕಂಪನಿಗಳು ಕಾರು ದರಗಳನ್ನು ರು.50 ಸಾವಿರವರೆಗೂ ಹೆಚ್ಚಿಸಿವೆ. ಹೊಸ ದರಗಳು ಜನವರಿಯಿಂದಲೇ ಕಾರ್ಯ ರೂಪಕ್ಕೆ ಬರಲಿವೆ. 
ಉತ್ಪಾದನೆ ದರ ಹೆಚ್ಚಿರುವುದರಿಂದ ದರಗಳನ್ನು ಏರಿಕೆ ಮಾಡುತ್ತಿರುವುದಾಗಿ ಕಂಪನಿಗಳು ಹೇಳಿವೆ. ಮಾರುತಿ ಸುಜುಕಿ ಇಂಡಿಯಾ ಈಗಾಗಲೇ ತನ್ನ ಎಲ್ಲ ಮಾಡೆಲ್‍ಗಳ ದರಗಳನ್ನು ರು.20 ಸಾವಿರವರೆಗೂ ಹೆಚ್ಚಿಸಿದೆ. 
ಈ ದರ ಏರಿಕೆಯಿಂದ ಮಾರಾಟದ ಮೇಲೆ ಪರಿಣಾಮ ಬೀರಿದರೂ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆಯನ್ನು ಉಳಿಸಿಕೊಳ್ಳುವುದಾಗಿ ನಿಸಾನ್ ಮೋಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಅರುಣ್ ಮಲ್ಹೋತ್ರ ಹೇಳಿದ್ದಾರೆ.
SCROLL FOR NEXT