ನವದೆಹಲಿ: ಮಹತ್ವದ ಐತಿಹಾಸಿಕ ಕ್ರಮವೊಂದರಲ್ಲಿ ಸರಿಸುಮಾರು ದಶಕದ ನಂತರ ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರವನ್ನು 0.25 ಶೇಕಡಾದಷ್ಟು ಹೆಚ್ಚಿಸಿದ್ದು, ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದ ವಿಶ್ವದ ಅತಿ ದೊಡ್ಡ ಆರ್ಥಿಕ ರಾಷ್ಟ್ರ ಹೊರಬರುವ ಸೂಚನೆ ನೀಡಿದೆ.
ಅಮೆರಿಕದ ಕೇಂದ್ರ ಬ್ಯಾಂಕು ಆಗಿರುವ ಫೆಡರಲ್ ರಿಸರ್ವ್ ಹೆಚ್ಚಿಸಿರುವ ಬಡ್ಡಿ ದರವು ಮಾರುಕಟ್ಟೆಯ ಆರ್ಥಿಕ ಚೇತರಿಕೆಯನ್ನು ಸೂಚಿಸುತ್ತದೆ. 2006ರಿಂದ 2008ರವರೆಗೆ ಅಮೆರಿಕ ಎದುರಿಸಿದ್ದ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರುವ ಸೂಚನೆ ನೀಡಿದೆ.
ಅಧಿಕ ಸಾಲ ವೆಚ್ಚವನ್ನು ಭರಿಸುವ ಶಕ್ತಿ ಅಮೆರಿಕಕ್ಕೆ ಇದೆಯೇ ಇಲ್ಲವೇ ಎಂಬ ಬಗ್ಗೆ ಇರುವ ಚರ್ಚೆಗೆ ಕೊನೆಹಾಡಲು ಫೆಡರಲ್ ಬ್ಯಾಂಕಿನ ಯೋಜನಾ ನಿರ್ಣಯ ಸಮಿತಿ ತನ್ನ ಷೇರು ಮಾರುಕಟ್ಟೆಯ ಬಡ್ಡಿದರವನ್ನು 0.25 ಶೇಕಡಾದಿಂದ 0.50ಕ್ಕೆ ಹೆಚ್ಚಿಸಿದೆ.ಅಮೆರಿಕದಲ್ಲಿ ಈ ವರ್ಷದ ಕಾರ್ಮಿಕ ಮಾರುಕಟ್ಟೆಯ ಸ್ಥಿತಿಗತಿ ಉತ್ತಮವಾಗಿದೆ. ಹಣದುಬ್ಬರ ಶೇಕಡಾ 2ರಷ್ಟು ಹೆಚ್ಚಿಕೆಯಾಗಿದೆ.