ತೆರಿಗೆ ಜಾಲಕ್ಕೆ 27 ಲಕ್ಷ ಮಂದಿ
ದೇಶಾದ್ಯಂತ 27 ಲಕ್ಷ ಹೊಸ ತೆರಿಗೆದಾರರು ಸೇರ್ಪಡೆಯಾಗಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ...
ನವದೆಹಲಿ: ದೇಶಾದ್ಯಂತ 27 ಲಕ್ಷ ಹೊಸ ತೆರಿಗೆದಾರರು ಸೇರ್ಪಡೆಯಾಗಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ಈ ವರ್ಷ ಹೊಸದಾಗಿ 1 ಕೋಟಿ ಜನರನ್ನು ಆದಾಯ ತೆರಿಗೆ ವಾಪ್ತಿಗೆ ಸೇರಿಸಲು ಇಲಾಖೆ ಗುರಿ ನಿಗದಿ ಮಾಡಿತ್ತು. ಆದರೆ ಕೇವಲ 27 ಲಕ್ಷ ಮಂದಿಯನ್ನಷ್ಟೇ ಸೇರ್ಪಡೆ ಮಾಡಿಕೊಳ್ಳಲಾಗಿದೆ.
ಗುಜರಾತ್, ಗೋವಾ ಮತ್ತು ಮಹಾರಾಷ್ಟ್ರಗಳಿಂದ ಹೆಚ್ಚು ಮಂದಿ ಹೊಸ ತೆರಿಗೆದಾರರು ಹುಟ್ಟಿಕೊಂಡಿದ್ದಾರೆ ಎಂದು ಹೇಳಲಾಗಿದ್ದು, ದೇಶಾದ್ಯಂತ 1 ಕೋಟಿ ಮಂದಿಯನ್ನು ಸೇರಿಸುವ ಗುರಿ ತಲುಪುವುದು ಕಷ್ಟದ ಕೆಲಸ ಎಂದು ತೆರಿಗೆ ಇಲಾಖೆಯ ಅಧಿಕಾರಿಗಳೇ ಹೇಳಿದ್ದಾರೆ.
ಅಲ್ಲದೆ ಹೊಸ ತೆರಿಗೆದಾರರನ್ನು ಸೇರಿಸುವ ಸಂಬಂಧ ಆಂದೋಲನ ಮಾಡಬೇಕು ಎಂದೂ ಹೇಳಿದ್ದಾರೆ.