ಮುಂಬೈ: ಕಳೆದ ವರ್ಷ ಷೇರು ಮಾರುಕಟ್ಟೆ ವಹಿವಾಟು ಭಾರಿ ಏರಿಳಿತದಿಂದ ಕೂಡಿದ್ದರೂ ಮುಂಬೈ ಷೇರು ಪೇಟೆಯಲ್ಲಿ ಲಿಸ್ಟ್ ಆಗಿರುವ ಎಲ್ಲ ಕಂಪನಿಗಳ ಮಾರುಕಟ್ಟೆ ಬಂಡವಾಳದಲ್ಲಿ ರು.2 ಲಕ್ಷ ಕೋಟಿ ಏರಿಕೆ ಕಂಡಿದೆ.
ಈ ವರ್ಷ ಹಲವು ಹೊಸ ಕಂಪನಿಗಳು ಲಿಸ್ಟ್ ಆಗಿದ್ದು ಸಹ ಇದಕ್ಕೆ ನೆರವಾಗಿದೆ. ಈ ವರ್ಷದಲ್ಲಿ ಕಂಪನಿಗಳ ಮಾರುಕಟ್ಟೆ ಬಂಡವಾಳ ರು.2,02,493 ಕೋಟಿ ಏರಿಕೆ ಕಂಡು ರು.1,00,37,734 ಕೋಟಿಗೆ ತಲುಪಿದೆ.
ಇದು ಸತತ ಐದನೇ ವರ್ಷ ಮಾರುಕಟ್ಟೆ ಬಂಡವಾಳದಲ್ಲಿ ಏರಿಕೆ ದಾಖಲಾಗಿದೆ. ವರ್ಷಾಂತ್ಯಕ್ಕೆ ಸೆನ್ಸೆಕ್ಸ್ 1,381.88 ಅಂಕ ಕುಸಿತ ಅಂದರೆ ಶೇಕಡ 6ರವರೆಗೂ ನಷ್ಟ ಕಂಡಿದೆ. ಸೆಪ್ಟೆಂಬರ್ 8ರಂದು ವರ್ಷದ ಕನಿಷ್ಠ 24,833.54ಕ್ಕೆ ತಲುಪಿತ್ತು.