ಸ್ಮಾರ್ಟ್ ಫೋನ್ 
ವಾಣಿಜ್ಯ

ಪಿಸಿ ಮಾರುಕಟ್ಟೆ ಕಸಿದ ಸ್ಮಾರ್ಟ್ ಫೋನ್

ಗ್ರಾಹಕರು ಸ್ಮಾರ್ಟ್ ಫೋನ್ ಮತ್ತು ಟ್ಯಾಬ್ಲೆಟ್ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆಯುತ್ತಿರುವುದರಿಂದ ಪರ್ಸನಲ್ ಕಂಪ್ಯೂಟರ್ (ಪಿಸಿ) ಮಾರಾಟ...

ನವದೆಹಲಿ: ಗ್ರಾಹಕರು ಸ್ಮಾರ್ಟ್ ಫೋನ್ ಮತ್ತು ಟ್ಯಾಬ್ಲೆಟ್ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆಯುತ್ತಿರುವುದರಿಂದ ಪರ್ಸನಲ್ ಕಂಪ್ಯೂಟರ್  (ಪಿಸಿ)  ಮಾರಾಟ ಗಣನೀಯವಾಗಿ ಇಳಿಮುಖ ಕಂಡಿದೆ. ಇದೇ ಮೊದಲ ಬಾರಿಗೆ ಪಿ ಸಿ ಮಾರಾಟ 10.6 ದಶಲಕ್ಷ ಯೂನಿಟ್ ಗೆ ಇಳಿದಿದ್ದು ಶೇ. 10 ರಷ್ಟು ಕುಸಿದಿದೆ ಎಂದು ಮಾಹಿತಿ ತಂತ್ರಜ್ಞಾನ ಸಾಧನಗಳ ಉತ್ಪಾದಕರ ಒಕ್ಕೂಟ (ಎಂಎಐಟಿ) ಹೇಳಿದೆ. 2013-14ನೇ ಸಾಲಿನಲ್ಲಿ ಪಿಸಿ ಮತ್ತು ನೋಟ್‍ಬುಕ್  11.8 ದಶಲಕ್ಷ ಯೂನಿಟ್ ಮಾರಾಟವಾಗಿದ್ದು ಎಂದು ಎಂಎಐಟಿ  ಐಎಂಆರ್‍ಬಿ ವರದಿ ಹೇಳಿದೆ. ಪ್ರಿಂಟರ್, ಸರ್ವರ್ ಮತ್ತು ಕಂಪ್ಯೂಟರ್‍ಗಳ ಒಟ್ಟಾರೆ ಮಾರುಕಟ್ಟೆ 1,587 ಕೋಟಿ ಡಾಲರ್ ಗಳಷ್ಟಿದ್ದು ಕಳೆದ ವರ್ಷ ಶೇ.23.98ರಷ್ಟು ಏರಿಕೆ ದಾಖಲಿಸಿತ್ತು. ಸ್ಮಾರ್ಟ್ ಫೋನ್‍ಗಳ ಮಾರಾಟ ನಿರಂತರವಾಗಿ ಏರಿಕೆ ಕಾಣುತ್ತಿದ್ದರೆ ಪಿಸಿ ಮಾರಾಟ ಇಳಿಮುಖ ಕಾಣುತ್ತಿದೆ. ಪಿಸಿಗಳನ್ನು ಪ್ರತಿ ಮನೆಗೆ ತಲುಪಿಸುವುದೇ ಈ ಕುಸಿತ ತಡೆಯಲು ಇರುವ ಏಕೈಕ ಮಾರ್ಗ ಎಂದು ಎಂಎಐಟಿ ಅಧ್ಯಕ್ಷ ಅಮರ್‍ಬಾಬು ಹೇಳಿದ್ದಾರೆ. ಪಿಸಿಗಳನ್ನು ಬದಲಾಯಿಸಲು ಇಚ್ಚಿಸುವ ಗ್ರಾಹಕರು ಸ್ಮಾರ್ಟ್ ಫೋನ್ ಮತ್ತು ಟ್ಯಾಬ್ಲೆಟ್ ಖರೀದಿಸುತ್ತಿದ್ದಾರೆ. ಮೊದಲ ಬಾರಿಗೆ ಬಳಕೆ ಮಾಡುತ್ತಿರುವವರು ಮಾತ್ರ ಪಿಸಿಖರೀದಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

'ಜೀವನ ನರಕ, ನನ್ನ ಪಾಲಿನ ದೆವ್ವ ಸತ್ತಿದೆ, ಸತ್ತ ಮಾತ್ರಕ್ಕೆ ಪಾಪ ಕಳೆಯಲ್ಲ': ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಮತ್ತೆ ಕಿಡಿ-Video

ಈ ಬಾರಿ ಮೈಸೂರು ದಸರಾ ಮತ್ತಷ್ಟು ಆಕರ್ಷಕ; 146 ಕಿ.ಮೀ. ದೀಪಾಲಂಕಾರ; 3,500 ಡ್ರೋನ್‌ಗಳ ಪ್ರದರ್ಶನ

ಭಾರತೀಯ ಮೂಲದ ನ್ಯಾಯಶಾಸ್ತ್ರಜ್ಞೆಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ; ನವನೇತಮ್ ನವಿ ಪಿಳ್ಳೈಗೆ ಒಲಿದ ನೊಬೆಲ್ ಶಾಂತಿ ಗರಿ