ಚಿನ್ನ 
ವಾಣಿಜ್ಯ

ಚಿನ್ನ ನಾಲ್ಕು ತಿಂಗಳಲ್ಲೇ ಕನಿಷ್ಠ

ಜಾಗತಿಕ ಮಾರುಕಟ್ಟೆಗಳಲ್ಲಿನ ದುರ್ಬಲ ವಹಿವಾಟು ಮತ್ತು ದೇಶೀಯ ಆಭರಣ ತಯಾರಕರು ಹೆಚ್ಚಿನ ಖರೀದಿಗೆ ಮುಂದಾಗದಿದ್ದರಿಂದ ಶನಿವಾರದ ಚಿನಿವಾರ...

ನವದೆಹಲಿ: ಜಾಗತಿಕ ಮಾರುಕಟ್ಟೆಗಳಲ್ಲಿನ ದುರ್ಬಲ ವಹಿವಾಟು ಮತ್ತು ದೇಶೀಯ ಆಭರಣ ತಯಾರಕರು ಹೆಚ್ಚಿನ ಖರೀದಿಗೆ ಮುಂದಾಗದಿದ್ದರಿಂದ ಶನಿವಾರದ ಚಿನಿವಾರ
ಪೇಟೆ ವಹಿವಾಟಿನಲ್ಲಿ ಹತ್ತು ಗ್ರಾಂ ಚಿನ್ನದ ದರ ರು.250 ಕುಸಿದಿದ್ದು ರು.26 ಸಾವಿರಕ್ಕೆ ಇಳಿದಿದೆ. ಇದು ಕಳೆದ ನಾಲ್ಕು ತಿಂಗಳಲ್ಲೇ ಚಿನ್ನದ ಕನಿಷ್ಠ ದರವಾಗಿದೆ. ಬೆಳ್ಳಿ ಸಹ
ಮಾರಾಟ ಒತ್ತಡಕ್ಕೆ ಸಿಲುಕಿದ್ದು ಕೆಜಿ ದರ ರು. 250ರಷ್ಟು ಇಳಿಕೆ ಕಂಡು ರು.34,350ಕ್ಕೆ ತಲುಪಿದೆ. ಅಮೆರಿಕ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ ಎಂಬ ವರದಿಗಳು ಚಿನ್ನ ಮತ್ತು ಬೆಳ್ಳಿಯ ಬೇಡಿಕೆಯನ್ನು ಕುಂದಿಸಿವೆ. ಡಾಲರ್ ದರ ಏರಿಕೆ ಕಾಣುತ್ತಿರುವುದೂ ಮತ್ತೊಂದು ಕಾರಣವಾಗಿದೆ. ನ್ಯೂಯಾರ್ಕ್ ಮಾರುಕಟ್ಟೆಯಲ್ಲೂ ಸಹ ಒಂದು ಔನ್ಸ್ ಚಿನ್ನದ ದರ ಶೇ.1ರಷ್ಟು ಇಳಿಮುಖ ಕಂಡು 1,131.90 ಡಾಲರ್‍ಗೆ ಕೊನೆಗೊಂಡಿತು. ಬೆಳ್ಳಿ ಸಹ ಪ್ರತಿ ಔನ್ಸ್ ದರ ಶೇ.1ರಷ್ಟು ಇಳಿಮುಖ ಕಂಡು 14.83 ಡಾಲರ್‍ಗೆ ಕೊನೆಗೊಂಡಿತು. ದೆಹಲಿ ಮಾರುಕಟ್ಟೆಯಲ್ಲಿ ಹತ್ತು ಗ್ರಾಂ ಸವರಿನ್ ಸಹ ರು.100 ಇಳಿಕೆ ಕಂಡು ರು.34,350ಕ್ಕೆ ತಲುಪಿತು. ನೂರು ಬೆಳ್ಳಿ ನಾಣ್ಯಗಳ ಮಾರಾಟ ದರ ರು.2 ಸಾವಿರ ಕುಸಿದು ರು.50 ಸಾವಿರಕ್ಕೆ ಮತ್ತು ಖರೀದಿ ದರ ರು.51 ಸಾವಿರಕ್ಕೆ ಇಳಿಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!

ಶಾಲೆಗಳಲ್ಲಿ ಸಂವಿಧಾನದ ಪ್ರಸ್ತಾವನೆ ಪಠಣೆ: ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್!

9/11 ಮಾದರಿಯಲ್ಲೇ ಇಸ್ರೇಲ್ ಧ್ವಂಸಕ್ಕೆ ಸಂಚು..! ಫ್ಲೈದುಬೈ ಏರ್‌ಲೈನ್ಸ್ ಸೇರಿದ್ದೇ ಆ ಕ್ರೂರ ಉದ್ದೇಶಕ್ಕಾಗಿ; ಸತ್ಯ ಬಾಯಿಬಿಟ್ಟ ಕಿಲ್ಲರ್ ಪೈಲಟ್ ಹಮಾಮ್..!