ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

2,280 ಕೋಟಿ ಡಾಲರ್ ಒಪ್ಪಂದ

ಪ್ರಸಕ್ತ ವರ್ಷದ ಮೊದಲಾರ್ಧದಲ್ಲಿ ದೇಶದಲ್ಲಿ 2,280 ಕೋಟಿ ಡಾಲರ್ ಮೌಲ್ಯದ 739 ಹೂಡಿಕೆ ಒಪ್ಪಂದಗಳು ಏರ್ಪಟ್ಟಿವೆ...

ಸಾಂದರ್ಭಿಕ ಚಿತ್ರ
Rashmi Kasaragodu
Updated On : 19 Jul 2015, 10:14 am

ಹೈದರಾಬಾದ್: ಪ್ರಸಕ್ತ ವರ್ಷದ ಮೊದಲಾರ್ಧದಲ್ಲಿ ದೇಶದಲ್ಲಿ 2,280 ಕೋಟಿ ಡಾಲರ್ ಮೌಲ್ಯದ 739 ಹೂಡಿಕೆ ಒಪ್ಪಂದಗಳು ಏರ್ಪಟ್ಟಿವೆ. 2014ರಲ್ಲಿ 2,230 ಕೋಟಿ ಡಾಲರ್ ಮೌಲ್ಯದ 554 ಒಪ್ಪಂದಗಳು ಏರ್ಪಟ್ಟಿದ್ದರೆ, 2013ರಲ್ಲಿ 1,760 ಕೋಟಿ ಡಾಲರ್ ಮೌಲ್ಯದ 461 ಒಪ್ಪಂದಗಳು ಏರ್ಪಟ್ಟಿದ್ದವು ಎಂದು ಹಣಕಾಸು ವಿಶ್ಲೇಷಣಾ ಸಂಸ್ಥೆ ಗ್ರಾಂಟ್ ಥಾರ್ಟನ್ ಹೇಳಿದೆ. 2014ರಿಂದಲೂ ಖಾಸಗಿ ಹೂಡಿಕೆ ಒಪ್ಪಂದಗಳು ಏರುಮುಖದಲ್ಲಿವೆ. ಈ ವರ್ಷದಲ್ಲಿ ಇದುವರೆಗೆ 710 ಡಾಲರ್  ಮೌಲ್ಯದ 462 ಯೋಜನೆಗಳು ಅನುಷ್ಠಾನದ ಹಂತದಲ್ಲಿವೆ ಎಂದು ವರದಿ ಹೇಳಿದೆ. ಕಳೆದೊಂದು ವರ್ಷದಿಂದ ಸಂಖ್ಯೆ ಮತ್ತು ಮೌಲ್ಯದಲ್ಲೂ ಗಣನೀಯ ಏರಿಕೆ ಕಾಣುತ್ತಿದೆ ಎಂದಿದೆ. ಆದರೂ 2015ರಲ್ಲಿ ವಿಲೀನ ಮತ್ತು ಸ್ವಾಧೀನ ಒಪ್ಪಂದಗಳ ಮೌಲ್ಯ 2012ರ ನಂತರದಲ್ಲಿ ಮೊದಲ ಬಾರಿಗೆ 1,580 ಕೋಟಿ ಡಾಲರ್‍ಗೆ ಕುಸಿದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement