ನವದೆಹಲಿ: ಸೋಮವಾರದ ಚಿನಿವಾರ ಪೇಟೆ ವಹಿವಾಟಿನಲ್ಲಿ ಹತ್ತು ಗ್ರಾಂ ಚಿನ್ನದ ದರ ರು.300 ಕುಸಿದಿದ್ದು ರು.25,700ಕ್ಕೆ ಕೊನೆಗೊಂಡಿದೆ. ಈ ದರ ಕಳೆದ ಎರಡು ವರ್ಷಗಳಲ್ಲೇ ಕನಿಷ್ಠವಾಗಿದೆ. ಬೆಳ್ಳಿ ಕೆಜಿ ದರ ಸಹ ರು.150 ಇಳಿಮುಖ ಕಂಡು 34,200ಕ್ಕೆ ತಲುಪಿದೆ.
ರಿಟೇಲ್ ಮತ್ತು ಆಭರಣ ತಯಾರಕರಿಂದ ಬೇಡಿಕೆ ಕಡಿಮೆಯಾಗಿದ್ದರಿಂದ ದರಗಳು ತೀವ್ರ ಕುಸಿತ ಕಂಡಿವೆ. ಜಾಗತಿಕ ಮಾರುಕಟ್ಟೆಗಳಲ್ಲಿ ದರಗಳು ತೀವ್ರವಾಗಿ ಕುಸಿದಿದ್ದರಿಂದ ದೇಶೀಯ ಮಾರುಕಟ್ಟೆ ಅದೇ ದಾರಿ ಹಿಡಿದವು. ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿದರಗಳನ್ನು ಹೆಚ್ಚಿಸಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಹೂಡಿಕೆದಾರರು ಚಿನ್ನದಿಂದ ವಿಮುಖರಾದರು. ದರಗಳು ಐದು ವರ್ಷಗಳಲ್ಲೇ ಕನಿಷ್ಟ ಮಟ್ಟಕ್ಕೆ ಇಳಿದವು.
ದೇಶೀಯ ಮಾರುಕಟ್ಟೆಯಲ್ಲಿ ಆಭರಣ ತಯಾರಕರೊಂದಿಗೆ ಚಿನ್ನದ ಷೇರುಗಳಲ್ಲಿ ವಹಿವಾಟು ನಡೆಸುವವರೂ ಖರೀದಿಗೆ ಮುಂದಾಗಲಿಲ್ಲ. ವಿಶ್ವದ ಅತಿದೊಡ್ಡ ಚಿನ್ನದ ಗ್ರಾಹಕ ದೇಶವಾದ ಚೀನಾ ಮಾರುಕಟ್ಟೆಯಲ್ಲಿ ಎಂದಿಗಿಂತಲೂ ಹೆಚ್ಚು ಚಿನ್ನ ಮಾರಾಟ ನಡೆಯಿತು. ಸಿಂಗಾಪುರದ ಚಿನ್ನದ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ದರ 4.2ರಷ್ಟು ಕುಸಿದು 1,068 ಡಾಲರ್‍ಗೆ ಅಂತ್ಯಗೊಂಡಿತು.
2010ರ ನಂತರದಲ್ಲಿ ಇದು ಅತ್ಯಂತ ಕನಿಷ್ಠ ದರವಾಗಿದೆ. ಬೆಳ್ಳಿ ದರ ಸಹ ಶೇ.2.3ರಷ್ಟು ಇಳಿಮುಖ ಕಂಡು 14.54 ಡಾಲರ್‍ಗೆ ಕೊನೆಗೊಂಡಿತು. ನವದೆಹಲಿಯ ಚಿನಿವಾರ ಪೇಟೆಯಲ್ಲಿ ಶೇ.99.9 ಮತ್ತು 99.9 ಶುದಟಛಿ ಚಿನ್ನದ ದರಗಳು ತಲಾ ರು.300 ಇಳಿಕೆ ಕಂಡು ಕ್ರಮವಾಗಿ ರು.25,700 ಮತ್ತು ರು.25,550ಕ್ಕೆ ತಲುಪಿದವು.
2013ರ ಜೂನ್ ನಂತರದಲ್ಲಿ ಇದು ಕನಿಷ್ಠ ದರವಾಗಿದೆ. ಎಂಟು ಗ್ರಾಂ ತೂಕದ ಸವರಿನ್ ದರ ಸಹ ರು.200 ಇಳಿಮುಖ ಕಂಡು ರು.22,700ಕ್ಕೆ ತಲುಪಿತು. ಸಿದಟಛಿ ಬೆಳ್ಳಿ ಸಹ ರು.150 ಇಳಿಕೆ ಕಂಡು ರು.34,200ಕ್ಕೆ ವಹಿವಾಟು ಮುಗಿಸಿತು. ಬೆಳ್ಳಿ ನಾಣ್ಯ(ಸಾವಿರ) ಗಳ ಖರೀದಿ ದರ ಅತಿ ಹೆಚ್ಚು ರು.1,000 ಕುಸಿದು ರು.49,000ಕ್ಕೆ ತಲುಪಿದರೆ ಮಾರಾಟ ದರ ರು.50,000 ಇತ್ತು.