ಸಾಂದರ್ಭಿಕ ಚಿತ್ರ 
ವಾಣಿಜ್ಯ

ಮುಂದುವರೆದ ಚಿನ್ನದ ಕುಸಿತ

ಸತತ ಮೂರನೆ ದಿನ ಚಿನ್ನದ ಕುಸಿತ ಮುಂದುವರೆದಿದ್ದು ಮಂಗಳವಾರದ ವಹಿವಾಟಿನಲ್ಲಿ ಪ್ರತಿ ಹತ್ತು ಗ್ರಾಂ ದರದಲ್ಲಿ...

ನವದೆಹಲಿ: ಸತತ ಮೂರನೆ ದಿನ ಚಿನ್ನದ ಕುಸಿತ ಮುಂದುವರೆದಿದ್ದು ಮಂಗಳವಾರದ ವಹಿವಾಟಿನಲ್ಲಿ ಪ್ರತಿ ಹತ್ತು ಗ್ರಾಂ ದರದಲ್ಲಿ ರು.150 ಕುಸಿದು ರು.25,550ಕ್ಕೆ ತಲುಪಿದೆ. ಈ ದರ ದೇಶೀಯ ಮಾರುಕಟ್ಟೆಯಲ್ಲಿ ನಾಲ್ಕು ವರ್ಷಗಳಲ್ಲೇ ಕನಿಷ್ಠವಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲೂ ಸಹ ಸತತ ಒಂಬತ್ತನೇ ದಿನ ಚಿನ್ನದ ದರಗಳು ಕುಸಿತ ದಾಖಲಿಸಿದವು. ಜಾಗತಿಕ ಮಾರುಕಟ್ಟೆಗಳಲ್ಲಿನ ಈ ಬೆಳವಣಿಗೆ ದೇಶೀಯ ಚಿನಿವಾರ ಪೇಟೆ ಮೇಲೆ ಭಾರಿ ಒತ್ತಡ ಹೇರಿದೆ. ಇದೇ ಸಂದರ್ಭದಲ್ಲಿ ಆಭರಣ ತಯಾರಕರು ಖರೀದಿಗೆ ಮುಂದಾಗದಿದ್ದದು ಮತ್ತಷ್ಟು ಕುಸಿತಕ್ಕೆ ಕಾರಣವಾಗಿದೆ. ಆದರೆ ಬೆಳ್ಳಿ ಸ್ವಲ್ಪ ಚೇತರಿಕೆ ದಾಖಲಿಸಿತು.

ಕೈಗಾರಿಕೆಗಳಲ್ಲಿ ಬಳಕೆಗೆ ಬೆಳ್ಳಿ ಖರೀದಿಸಲು ಉದ್ಯಮಿಗಳು ಮುಂದಾಗಿದ್ದರಿಂದ ಕೆಜಿ ದರ ರು.100 ಏರಿಕೆ ಕಂಡು ರು.34,300ಕ್ಕೆ ದಿನದಂತ್ಯ ಕಂಡಿತು. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನವನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡುತ್ತಿರುವುದು ಮತ್ತು ಅಮೆರಿಕದ ಫೆಡರಲ್ ಬ್ಯಾಂಕ್ ತನ್ನ ಸಾಲಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಡಾಲರ್ ಮೌಲ್ಯದಲ್ಲಿ ಏರಿಕೆ ಕಾಣುತ್ತಿರುವುದು ದರ ಕುಸಿಯಲು ಪ್ರಮುಖ ಕಾರಣವಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ. ದೇಶೀಯ ಮಾರುಕಟ್ಟೆಯಲ್ಲಿ ರಿಟೇಲ್ ಹೂಡಿಕೆದಾರರು ಮತ್ತು ಆಭರಣ ತಯಾರಕರು ಖರೀದಿಯಿಂದ ದೂರ ಉಳಿದಿದ್ದರು. ಕಳೆದ ಮೂರು ದಿನ ಗಳಲ್ಲಿ ದರ ರು. 700 ಕುಸಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!