ಸಾಂದರ್ಭಿಕ ಚಿತ್ರ 
ವಾಣಿಜ್ಯ

ಉಳಿತಾಯಕ್ಕೆ ಸಪ್ತ ಸೂತ್ರ

ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿಯೇ ನಿಜ. ಆದರೆ ಹಾಗಂತ ದುಡಿದದ್ದನ್ನು ಅಲ್ಲಿಂದಲ್ಲಿಗೇ ಖಾಲಿ ಮಾಡುತ್ತಾ ಹೋದರೆ ಕಷ್ಟ ಬಂದಾಗ ಕಂಡವರ ಕಾಲು...

ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿಯೇ ನಿಜ. ಆದರೆ ಹಾಗಂತ ದುಡಿದದ್ದನ್ನು ಅಲ್ಲಿಂದಲ್ಲಿಗೇ ಖಾಲಿ ಮಾಡುತ್ತಾ ಹೋದರೆ ಕಷ್ಟ ಬಂದಾಗ ಕಂಡವರ ಕಾಲು ಹಿಡಿಯಬೇಕಾಗುತ್ತದೆ. ಹಾಗಾಗಿ ಉಳಿತಾಯ ಊಟದಷ್ಟೇ ಮುಖ್ಯ. ಹಾಗಾದರೆ ಅತ್ಯಂತ ಸರಳವಾಗಿ ಉಳಿತಾಯ ಮಾಡೋದು ಹೇಗೆ? ಇಲ್ಲಿವೆ ಸಪ್ತ ಸೂತ್ರಗಳು

ಉಳಿತಾಯ ದುಡಿಮೆಗೆ ಸಮ
ಹೌದು... ಸುಮ್ಮನೆ ಯೋಜಿಸಿ ನೋಡಿ, ನೀವು ಒಂದು ರುಪಾಯಿ ಉಳಿಸಿದರೆ ಆ ಒಂದು ರುಪಾಯಿಯನ್ನು ನೀವು ಗಳಿಸಿದಂತೆ  ಅಲ್ಲವೇ? ಗಳಿಕೆಯಷ್ಟೇ ಉಳಿತಾಯವೂ ಮುಖ್ಯ ಎಂಬ ಮಾತು ಚಾಲ್ತಿಯಲ್ಲಿ ಇರುವುದು ಇದೇ ಕಾರಣಕ್ಕೆ. ಹಾಗಾಗಿ ಹಿಂದುಮುಂದು ಯೋಚಿಸುವುದನ್ನು ನಿಲ್ಲಿಸಿ, ಮನಪೂರ್ವಕವಾಗಿ ಉಳಿತಾಯ ಆರಂಭಿಸಿ.

ಸಾರ್ವಜನಿಕ ಸಾರಿಗೆ ಬಳಕೆ
ಹಳೆಯ ವಾಹನಗಳ ಜೊತೆ ಏಗುವುದು ಭಾರಿ ಕಷ್ಟದ ಕೆಲಸ. ಈಗಂತೂ ಟ್ರಾಫಿಕ್ ಜಾಮ್, ಪೆಟ್ರೋಲ್ ದರ ಏರಿಕೆಯ ಕಿರಿಕಿರಿ ಹೆಜ್ಜೆ ಹೆಜ್ಜೆಗೂ ಸಿಗುತ್ತಲೇ ಇರುತ್ತದೆ. ಹಾಗಾಗಿ ಸಾರ್ವಜನಿಕ ಸಾರಿಗೆ ಬಳಸುವುದು ಆರೋಗ್ಯಕ್ಕೂ ಒಳ್ಳೆಯದು. ಹಣ ಉಳಿತಾಯದ ದೃಷ್ಟಿಯಿಂದಲೂ ಸೂಕ್ತವಾದದ್ದು.

ಆನ್‌ಲೈನ್ ಬಳಸಿ
ಸಿನಿಮಾ, ನಾಟಕ ನೋಡಲು ಟಿಕೆಟ್ ಬುಕ್ ಮಾಡುವುದು, ರೈಲು ಅಥವಾ ಬಸ್ ಪ್ರಯಾಣಕ್ಕೆ ಬುಕಿಂಗ್ ಮಾಡುವುದು, ದೂರವಾಣಿ, ವಿದ್ಯುತ್, ನೀರಿನ ಬಿಲ್ ಕಟ್ಟುವುದು ಮುಂತಾದ ಸಾಕಷ್ಟು ಕೆಲಸಗಳಿಗೆ ಆನ್‌ಲೈನ್ ಹೇಳಿಮಾಡಿಸಿದ ದಾರಿ. ಇದರಿಂದ ಸಮಯ ಉಳಿತಾಯವಾಗುತ್ತದೆ. ಜೊತೆಗೆ ಜೇಬಿಗೂ ಹೊರೆಯಾಗುವುದಿಲ್ಲ.

ಹೋಲ್‌ಸೇಲ್‌ಗಿರಲಿ ಆದ್ಯತೆ
ಸಣ್ಣಪುಟ್ಟ ಅಂಗಡಿಗಳಲ್ಲಿ ಪದೇಪದೇ ಸ್ವಲ್ಪ ಸ್ವಲ್ಪ ಕೊಳ್ಳುವ ಬದಲು ಹೋಲ್‌ಸೇಲ್ ಅಂಗಡಿಗಳಲ್ಲಿ ಒಮ್ಮೆಗೇ ತರುವಂಥ ವ್ಯವಸ್ಥೆಗೆ ಮುಂದಾದರೆ ಆಗಾಗ ತಲೆಕೆಡಿಸಿಕೊಳ್ಳುವುದು ತಪ್ಪುತ್ತದೆ. ಮುಖ್ಯವಾಗಿ ಸಾಕಷ್ಟು ಉಳಿತಾಯವಾಗುತ್ತದೆ.

ಅನವಶ್ಯಕ ವಸ್ತುಗಳನ್ನು ಮಾರಿಬಿಡಿ
ಲ್ಯಾಪ್‌ಟಾಪ್, ಮೊಬೈಲ್ ಮುಂತಾದ ವಸ್ತುಗಳನ್ನು ಹೊಸತಾಗಿಯೇ ಕೊಳ್ಳಬೇಕೆಂದೇನೂ ಇಲ್ಲ. ಸೆಕೆಂಡ್ ಹ್ಯಾಂಡ್ ವಸ್ತುಗಳಲ್ಲಿ ಹುಡುಕಿ, ಉತ್ತಮ ಅನಿಸಿದ್ದನ್ನು ಕೊಂಡುಕೊಳ್ಳಬಹುದು. ಹಾಗೆಯೇ ಅಂತಹ ವಸ್ತುಗಳು ನಿಮ್ಮ ಬಳಿ ಇದ್ದರೆ ಮಾರಲೂಬಹುದು. ಈಗಂತೂ ಇದಕ್ಕಾಗಿಯೇ ಒಎಲ್‌ಎಕ್ಸ್, ಕ್ವಿಕರ್ ಮುಂತಾದ ವೆಬ್‌ಸೈಟ್‌ಗಳಿವೆ.

ಕ್ಯಾಶ್‌ಬ್ಯಾಕ್ ಕ್ರೆಡಿಟ್ ಕಾರ್ಡ್
ನಿಮ್ಮ ಕ್ರೆಡಿಟ್ ಕಾರ್ಡ್ ಬಳಕೆ ಮಾಡುವಾಗ ಕ್ಯಾಶ್‌ಬ್ಯಾಕ್ ಸಿಗುವಂಥ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದು. ಸಿನಿಮಾ ಟಿಕೆಟ್ ಬುಕ್ ಮಾಡುವುದು, ಫೋನ್ ಮತ್ತಿತರ ಬಿಲ್ ಕಟ್ಟುವ ಸಂದರ್ಭಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದರೆ ಶೇ.5ರಿಂದ 10ರಷ್ಟು ಕ್ಯಾಶ್‌ಬ್ಯಾಕ್ ಸಿಗುವ ಸಾಧ್ಯತೆ ಉಂಟು.

ಖರ್ಚು ನ್ಯಾಯಯುತವಾಗಿರಲಿ
ನೀವು ಮಾಡುವ ಖರ್ಚು ತೀರಾ ಅತ್ಯಗತ್ಯ ಎನಿಸಿದ ವಸ್ತು ಅಥವಾ ವಿಷಯಗಳಿಗೆ ಸಂಬಂಧಪಟ್ಟಿದೆಯೇ ಎಂಬುದನ್ನು ಒಮ್ಮೆ ಪರಿಶೀಲಿಸಿಕೊಳ್ಳಿ. ಹಾಗಿಲ್ಲ ಎಂದಾದರೆ ತಕ್ಷಣವೇ ಅನಗತ್ಯ ವಸ್ತು ವಿಷಯಗಳಿಗೆ ಖರ್ಚು ಮಾಡುವುದನ್ನು ನಿಲ್ಲಿಸಿ. ಆಗ ತನ್ನಿಂತಾನೇ ಉಳಿತಾಯ ಶುರುವಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ