ಲಂಡನ್: ಭ್ರಷ್ಟಾಚಾರ, ದುರಾಡಳಿತದಿಂದ ದಿವಾಳಿ ಅಂಚಿಗೆ ತಲುಪಿರುವ ಆಫ್ರಿಕಾ ಖಂಡದ ಪುಟ್ಟ ದೇಶವಾದ ಜಿಂಬಾಬ್ವೆ ಕರೆನ್ಸಿ ಸಂಪೂರ್ಣ ಮೌಲ್ಯ ಕಳೆದುಕೊಂಡಿದೆ. ಅಲ್ಲಿನ ಸರ್ಕಾರ ತನ್ನ ಕರೆನ್ಸಿಯನ್ನೇ ರದ್ದು ಮಾಡಲು ಹೊರಟಿದೆ. ಅಲ್ಲೀಗ ಒಂದು ಅಮೆರಿಕನ್ ಡಾಲರ್=35,000,000,000,000,000 ಜಿಂಬಾಬ್ವೆ ಡಾಲರ್ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಕರೆನ್ಸಿ ಮೌಲ್ಯ ಪತನದಿಂದಾಗಿ ಜಿಂಬಾಬ್ವೆಯ ಹಣವನ್ನು ಯಾರೂ ಕೇಳದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲೀಗ 2009ರಿಂದ ಅಮೆರಿಕದ ಡಾಲರ್ ಮತ್ತು ದಕ್ಷಿಣ ಆಫ್ರಿಕಾದ ರ್ಯಾಂಡ್ ಅನ್ನು ಅಧಿಕೃತ ಹಣವಾಗಿ ಬಳಸಲು ಆರಂಭಿಸಲಾಗಿದೆ.
ಇಂಥ ಪರಿಸ್ಥಿತಿಯಲ್ಲಿ ಸಾರ್ವಜನಿಕರು ಯಾವುದಾದರೂ ಶಾಪಿಂಗ್‍ಗೆ ಹೋಗಬೇಕಾ ದರೂ ಒಂದು ದೊಡ್ಡ ಚೀಲದ ತುಂಬಾ ನೋಟುಗಳನ್ನು ಇಟ್ಟುಕೊಂಡು ಹೋಗ
ಬೇಕಾದ ಸ್ಥಿತಿ ಇದೆ. ಜಿಂಬಾಬ್ವೆ ಅಧ್ಯಕ್ಷ ರಾಬರ್ಟ್ ಮುಗಾಬೆ ಸರ್ಕಾರ ಮುಂದಿನ ವಾರ ಅಧಿಕೃತ ರಾಷ್ಟ್ರೀಯ ಕರೆನ್ಸಿಯನ್ನೇ ರದ್ದು ಮಾಡಲಿದೆ.