ತೆರಿಗೆ ವಂಚನೆ ತಡೆಗೆ 'ಸ್ಮಾರ್ಟ್ ಡೇಟಾಬೇಸ್'
ತೆರಿಗೆ ವಂಚನೆ ಪತ್ತೆ ಸೇರಿದಂತೆ ಎಲ್ಲಾ ಹಣಕಾಸು ವಹಿವಾಟುಗಳು ನಡೆಸಲು ಸ್ಮಾರ್ಟ್ ಡೇಟಾಬೇಸ್ ನ್ನು ತೆರಿಗೆ ಇಲಾಖೆಯಲ್ಲಿ ಅಳವಡಿಸಲಾಗುತ್ತಿದೆ...
ನವದೆಹಲಿ:ತೆರಿಗೆ ವಂಚನೆದಾರರೇ ಹುಷಾರು, ಇನ್ನು ಮುಂದೆ ನೀವು ತೆರಿಗೆ ಕಟ್ಟದೆ ತಪ್ಪಿಸಿಕೊಳ್ಳಬಹುದು ಎಂದು ಭಾವಿಸಬೇಡಿ.ತೆರಿಗೆ ವಂಚನೆ ಪತ್ತೆ ಸೇರಿದಂತೆ ಎಲ್ಲಾ ಹಣಕಾಸು ವಹಿವಾಟುಗಳು ನಡೆಸಲು ಸ್ಮಾರ್ಟ್ ಡೇಟಾಬೇಸ್ ನ್ನು ತೆರಿಗೆ ಇಲಾಖೆಯಲ್ಲಿ ಅಳವಡಿಸಲಾಗುತ್ತಿದೆ.
ಹೊಸ " ಸ್ಮಾರ್ಟ್ ಡೇಟಾಬೇಸ್ ತೆರಿಗೆ ಪರಿಶೀಲಿಸಲು ಸಹಾಯ ಮಾಡುತ್ತದೆ ಎಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ತೆರಿಗೆ ಕಟ್ಟದೆ ವಂಚಿಸುವವರಿಂದ ದಂಡ ಕಟ್ಟಿಸಿಕೊಳ್ಳುವುದು, ತೆರಿಗೆ ಕಟ್ಟದಿರುವ ಪರಿಸ್ಥಿತಿ ಭಾರತ ದೇಶದ ಆರ್ಥಿಕ ಬೆಳವಣಿಗೆಗೆ ಉತ್ತಮವಲ್ಲ ಎಂದು ನೇರ ತೆರಿಗೆ ಕೇಂದ್ರ ಮಂಡಳಿಯ ಅಧ್ಯಕ್ಷ ಅನಿತಾ ಕಪೂರ್ ಸುದ್ದಿಗಾರರಿಗೆ ತಿಳಿಸಿದರು.
ಈ ವರ್ಷಾಂತ್ಯಕ್ಕೆ ಡಾಟಾಬೇಸ್ ನ್ನು ಅಳವಡಿಸಲಾಗುತ್ತಿದ್ದು, ಮುಂದಿನ ವರ್ಷ ಕಾರ್ಯಾರಂಭ ಮಾಡಲಿದೆ.