ಮುಂಬೈ/ನವದೆಹಲಿ: ಆಂತರಿಕ ಸಂಘರ್ಷದಿಂದ ನಲುಗಿರುವ ಮಧ್ಯ ಪ್ರಾಚ್ಯ ರಾಷ್ಟ್ರ ಯೆಮೆನ್ ಮೇಲೆ ಸೌದಿ ಅರೇಬಿಯಾ ದಾಳಿ ಆರಂಭಿಸಿದೆ. ತತ್ಪರಿಣಾಮವಾಗಿ ವಿಶ್ವಮಾರುಕಟ್ಟೆಯಲ್ಲಿ ಕಚ್ಛಾತೈಲದ ಬೆಲೆ ಶೇ. 5ರಷ್ಟು ಏರಿಕೆಯಾಗಿದೆ.
ಈ ಬಿಕ್ಕಟ್ಟು ರಾಷ್ಟ್ರಗಳ ಷೇರು ಮಾರುಕಟ್ಟೆ ಮೇಲೆ ಕೂಡ ಪರಿಣಾಮ ಬೀರಿದೆ. ಕಳೆದ ಮೂರು ತಿಂಗಳಿಗೆ ಹೋಲಿಕೆ ಮಾಡಿದರೆ ಗುರುವಾರ ಮುಂಬೈ ಷೇರುಮಾರುಕಟ್ಟೆ ಸಂವೇದಿ ಸೂಚ್ಯಂಕ 654 ಅಂಕಗಳಷ್ಟು ಕುಸಿತ ಕಂಡಿದೆ. ದಿನದ ಅಂತ್ಯಕ್ಕೆ 27,384.87ರಲ್ಲಿ ಸೂಚ್ಯಂಕ ಮುಕ್ತಾಯವಾಗಿದೆ. ಜ.6ರಂದು ಸೂಚ್ಯಂಕ 854. 86ರಷ್ಟು ಕುಸಿದಿತ್ತು. ನಿಫ್ಟಿ ಸೂಚ್ಯಂಕ 854.86 ರಷ್ಟು ಕುಸಿದಿತ್ತು. ನಿಫ್ಟಿ ಸೂಚ್ಯಂಕ ಕೂಡ 189 ಅಂಕಗಳಷ್ಟು ಪತನವಾಗಿದೆ.
ಪ್ರಸಕ್ತ ವರ್ಷ ಈ ವಾರ ಇದು ಅತ್ಯಂತ ಕನಿಷ್ಠ ಕುಸಿತದ ದಿನ ಎನ್ನುವುದು ಷೇರುಮಾರುಕಟ್ಟೆ ತಜ್ಞರ ಅಭಿಪ್ರಾಯವಾಗಿದೆ ಹಾಲಿ ವಾರದಲ್ಲಿ 1.280 ಅಂಕಗಳ ಪತನವಾಗಿದೆ. ಹಾಂಕಾಂಗ್, ಜಪಾನ್, ದ.ಕೊರಿಯಾ, ಐರೋಪ್ಯ ಒಕ್ಕೂಟದ ಮಾರುಕಟ್ಟೆಯಲ್ಲಿಯೂ ಮಧ್ಯ ಪ್ರಾಚ್ಯ ಬಿಕ್ಕಟ್ಟಿನ ಪ್ರಭಾವ ಗೋಚರವಾಗಿದೆ. ಆದರೆ ಅಮೆರಿಕದ ಮಾರುಕಟ್ಟೆ ಕೂಡ ವಾಲ್ ಸ್ಟ್ರೀಟ್ ನಲ್ಲಿ ಷೇರುಗಳ ಮಾರಟ ಹೆಚ್ಚಿದ್ದರಿಂದ ಸೂಚ್ಯಂಕ ಕುಸಿದಿದೆ.
ಚಿನ್ನ ಏರಿಕೆ
ಗಮನಾರ್ಹ ಅಂಶವೆಂದರೆ ಚಿನ್ನ-ಬೆಳ್ಳಿ ಮಾರುಕಟ್ಟೆ ಇಳಿಕೆ ಕಾಣದೆ ಏರಿಕೆ ಕಂಡಿದೆ. ಮುಂಬೈನಲ್ಲಿ ಬೆಳ್ಳಿ 1 ಕೆಜಿ ರು 39, 010, ಸ್ಟ್ಯಾಂಡರ್ಡ್ ಚಿನ್ನ ರು.26,690, ಶುದ್ಧ ಚಿನ್ನ ರು.26,840 ಆಗಿತ್ತು. ಬೆಂಗಳೂರಿನಲ್ಲಿ ಬೆಳ್ಳಿ 1 ಕೆಜಿ ರು. 38,464, 10 ಗ್ರಾಂ ಸ್ಟ್ಯಾಂಡರ್ಡ್ ಚಿನ್ನ ರು.27,010, 1 ಗ್ರಾಂ ಆಭರಣ ಚಿನ್ನದ ಬೆಲೆ ರು.2,522 ಆಗಿತ್ತು.