ನವದೆಹಲಿ: `ನಮ್ಮ ಬ್ಯಾಂಕ್‍ನಲ್ಲಿ ನೀವು ಠೇವಣಿ ಇರಿಸಿರುವ ಮೊತ್ತ ಭಾರತ ಸರ್ಕಾರಕ್ಕೆ ತೆರಿಗೆ ಪಾವತಿಸಿರುವುದೇ. ಈ ಬಗ್ಗೆ ನಮಗೆ ದಾಖಲೆ ನೀಡಿ'ಹೀಗೆಂದು ಸ್ವಿಜರ್ಲೆಂಡ್‍ನ ಬ್ಯಾಂಕ್ ಗಳು ಭಾರತೀಯ ಖಾತೆದಾರರಿಗೆ ಕಟ್ಟುನಿಟ್ಟಿನ ಸೂಚನೆ ರವಾನೆ ಮಾಡಿವೆ. ಕೇಂದ್ರ ಸರ್ಕಾರ ಸ್ವಿಜರ್‍ಲೆಂಡ್ ಸೇರಿದಂತೆ ಇತರ ವಿದೇಶಿ ರಾಷ್ಟ್ರಗಳ ಬ್ಯಾಂಕ್‍ಗಳಲ್ಲಿರುವ ಕಪ್ಪುಹಣವನ್ನು ಸ್ವದೇಶಕ್ಕೆ ತರುವ ನಿಟ್ಟಿನಲ್ಲಿ ಹಲವಾರು ಕಾನೂನು ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಹೀಗಾಗಿ, ಖಾತೆದಾರರು ತಮ್ಮ ಠೇವಣಿ ಬಗ್ಗೆ ಲೆಕ್ಕಪರಿಶೋಧಕರಿಂದ ಈ ಬಗ್ಗೆ ಪ್ರಮಾಣ ಪತ್ರ ಪಡೆಯುವಂತೆ ಮಾಡಿದೆ. ಹೀಗಾಗಿ, ಬ್ಯಾಂಕ್‍ಗಳು ಭಾರತದ ಕಾರ್ಪೊರೇಟ್ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಖಾತೆಯಲ್ಲಿ ಇರಿಸುವ ಮೊತ್ತ ಕಾನೂನುಬದ್ಧವಾಗಿರುವ ಬಗ್ಗೆ ಪದೇ ಪದೆ ಸೂಚನೆ ನೀಡುತ್ತಿದ್ದಾರೆ. ಇಷ್ಟು ಮಾತ್ರವಲ್ಲ ಕೇಂದ್ರ ಸರ್ಕಾರದ ಅ„ಕಾರಿಗಳು ಸ್ವಿಜರ್ಲೆಂಡ್‍ನ ಎಚ್
ಎಸ್‍ಬಿಸಿ ಬ್ಯಾಂಕಿಗೂ ಭೇಟಿ ನೀಡಿದ್ದಾರೆ. ತೆರಿಗೆ ಪಾವತಿ ಮಾಡದೆ ಖಾತೆ ತೆರೆದು ಠೇವಣಿ ಇರಿಸಿರುವ ವ್ಯಕ್ತಿಗಳು, ಸಂಸ್ಥೆಗಳ ಬಗ್ಗೆ ಮಾಹಿತಿ ಪಡಕೊಳ್ಳುತ್ತಿದ್ದಾರೆ. ಇಷ್ಟು
ಮಾತ್ರವಲ್ಲ ಭಾರತೀಯ ಅಧಿಕಾರಿಗಳು, ಅನುಮಾನಾಸ್ಪದ ಖಾತೆದಾರರ ಮತ್ತು ತೆರಿಗೆಗಳ್ಳರ ವಿರುದ್ಧ ಏಕೆ ಕಾನೂನು ಕ್ರಮ ಕೈಗೊಳ್ಳಬಾರದು ಎಂದು ಪ್ರಶ್ನಿಸಿದ್ದಾರೆ. ಕೇಂದ್ರ ಸರ್ಕಾರ ಈಗಾಗಲೇ ವಿದೇಶಿ ಬ್ಯಾಂಕ್‍ಗಳಲ್ಲಿ ಇರುವ ಠೇವಣಿ ಮತ್ತು ಆಸ್ತಿಗಳನ್ನು ಸ್ವದೇಶಕ್ಕೆ ತರುವ ಬಗ್ಗೆ ವಿಧೇಯಕ ರೂಪಿಸಿ ಲೋಕಸಭೆಯಲ್ಲಿ ಮಂಡಿಸಿರುವುದೂ ಈ ಬೆಳವಣಿಗೆಗೆ ಕಾರಣವಾಗಿದೆ.
ಸ್ವಯಂಚಾಲಿತ ಪದ್ಧತಿ: ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳ ಒತ್ತಡಕ್ಕೆ ಮಣಿದಿರುವ ಸ್ವಿಜರ್‍ಲೆಂಡ್ ತೆರಿಗೆ ಕಳ್ಳರ ಬಗ್ಗೆ ಮಾಹಿತಿ ವಿನಿಮಯಒಪ್ಪಂದಕ್ಕೆ ಸಹಿ ಹಾಕಲು ಮುಂದಾಗುತ್ತಿದೆ. ಜತೆಗೆ ಸ್ವಯಂಚಾಲಿತವಾಗಿ ಪರಸ್ಪರ ತೆರಿಗೆ ವಂಚರ ಮಾಹಿತಿ ವಿನಿಮಯಪದ್ಧತಿ ಜಾರಿಗೂ ಒಪ್ಪಿಕೊಳ್ಳಲುನಿರ್ಧರಿಸಿದೆ.