ನವದೆಹಲಿ: ಮಾಹಿತಿ ತಂತ್ರಜ್ಞಾನ ದೈತ್ಯ ವಿಪ್ರೋ ಸಂಸ್ಥೆಯ ಮುಖ್ಯ ವ್ಯಾವಹಾರಿಕಾ ಅಧಿಕಾರಿ ಸತೀಶ್ ಚಂದ್ರ ದೊರೆಸ್ವಾಮಿ ರಾಜೀನಾಮೆ ನೀಡಿದ್ದಾರೆ.
ಕೆಲವು ವಾರಗಳ ಹಿಂದೆ ಮೂರನೆ ಅತಿ ದೊಡ್ಡ ಸಾಫ್ಟ್ವೇರ್ ರಫ್ತುದಾರ ಸಂಸ್ಥೆ ತನ್ನ ಅಧಿಕಾರಿಗಳ ರಚನೆಯನ್ನು ಬದಲಾಯಿಸಿ, ಅಬಿದ್ ಅಲಿ ನೀಮುಚಾವ್ಲಾ ಅವರನ್ನು ಮುಖ್ಯ ಕಾರ್ಯನಿರ್ವಾಹಕಾ ಅಧಿಕಾರಿ ಎಂದು ನೇಮಿಸಿದ ಹಿನ್ನಲೆಯಲ್ಲೇ ಸತೀಶ್ ರಾಜಿನಾಮೆ ನೀಡಿದ್ದಾರೆ.
"ಸಂಸ್ಥೆಯಿಂದ ಹೊರಗೆ ಅವಕಾಶಗಳನ್ನು ಹರಸಿ ಸತೀಶ್ ಚಂದ್ರ ದೊರೆಸ್ವಾಮಿ ಅವರು ಹೊರನಡೆದಿದ್ದಾರೆ ಎಂದು ವಿಪ್ರೊ ಧೃಢೀಕರಿಸುತ್ತದೆ. ಅವರ ಮುಂದಿನ ಎಲ್ಲ ಕೆಲಸಗಳಿಗೂ ಒಳ್ಳೆಯದಾಗಲಿ ಮತ್ತು ಅವರು ನೀಡಿರುವ ಸೇವೆಗೆ ಧನ್ಯವಾದಗಳು" ಎಂದು ವಿಪ್ರೋ ಇಮೇಲ್ ಪ್ರತಿಕ್ರಿಯೆಯಲ್ಲಿ ತಿಳಿಸಿದೆ.
ಈ ಮೊದಲು ದೊರೆಸ್ವಾಮಿ ಮತ್ತೊಂದು ಸಾಫ್ಟ್ವೇರ್ ದೈತ್ಯ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ನಿಂದ ವಿಪ್ರೋಗೆ ಸೇರಿದ್ದರು. ದೊರೆಸ್ವಾಮಿ ಅವರ ಮುಂದಿನ ನಡೆಯ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.