(ಸಾಂದರ್ಭಿಕ ಚಿತ್ರ) 
ವಾಣಿಜ್ಯ

ಎಂಆರ್‍ಪಿಎಲ್‍ನಿಂದ 122 ಪೆಟ್ರೋಲ್ ಬಂಕ್

ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ವತಿಯಿಂದ ದಕ್ಷಿಣ ಭಾರತದ ವಿವಿಧೆಡೆ 122ಪೆಟ್ರೋಲ್ ಬಂಕ್‍ಗಳನ್ನು ಆರಂಭಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಚ್.ಕುಮಾರ್ ತಿಳಿಸಿದ್ದಾರೆ...

ಮಂಗಳೂರು: ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ವತಿಯಿಂದ ದಕ್ಷಿಣ ಭಾರತದ ವಿವಿಧೆಡೆ 122 ಪೆಟ್ರೋಲ್ ಬಂಕ್‍ಗಳನ್ನು ಆರಂಭಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಚ್.ಕುಮಾರ್ ತಿಳಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧೆಡೆ, ಉತ್ತರ ಕೇರಳ ಹಾಗೂ ಗೋವಾ ರಾಜ್ಯದ ಹಲವೆಡೆಗಳಲ್ಲಿ ಪೆಟ್ರೋಲ್ ಬಂಕ್‍ಗಳನ್ನು ಕೆಲವೇ ವಾರಗಳಲ್ಲಿ ಆರಂಭಿಸಗುವುದು. ಎಂಆರ್‍ಪಿಎಲ್ ಪೆಟ್ರೋಲ್ ಹಾಗೂ ಡೀಸೆಲ್ ಉತ್ಕೃಷ್ಟ ಗುಣಮಟ್ಟದ್ದಾಗಿದೆ. ಈ ಕಾರಣದಿಂದಾಗಿ ಮಂಗಳೂರಿನಲ್ಲಿ ಎಲ್ಲ ಕಡೆಗಳಿಗಿಂತಲೂ ಒಂದು ರು. ಕಡಿಮೆ ದರದಲ್ಲಿ ಇಂಧನ ಸಿಗುತ್ತಿದೆ ಎಂದರು.

ಭಯ ಬೇಡ: ಎಂಆರ್‍ಪಿಎಲ್ ನಿಂದಾಗಿ ಜನರಿಗೆ ಹಾಗೂ ಪರಿಸರಕ್ಕೆ ಯಾವುದೇ ತೊಂದರೆಯಾಗದು. ಈ ಬಗ್ಗೆ ಅನಗತ್ಯ ಭಯ ಹಾಗೂ ಅಪಪ್ರಚಾರ ಬೇಡ ಎಂದ ಅವರು, ಮುನ್ನೆಚ್ಚರಿಕೆ ಕ್ರಮ ವಾಗಿ ಕಂಪೆನಿಯಲ್ಲಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿ ದೆ. ಪ್ರತಿಯೊಂದು ಉಪಕರಣಗಳು ಉತ್ಕೃಷ್ಟ ದರ್ಜೆಯದಾಗಿವೆ. ಶೇ.20ರಷ್ಟು ಹಣವನ್ನು ಸುರಕ್ಷತೆಗಾಗಿಯೇ ಮೀಸಲಿಡಲಾಗಿದೆ. ಅಲ್ಲದೆ, ಸಂಸ್ಥೆಯ ಪ್ರತಿಯೊಬ್ಬ ಸಿಬ್ಬಂದಿಯೂ ಉತ್ತಮ ತರಬೇತಿ ಪಡೆದವರಾಗಿದ್ದಾರೆ. ಸಂಪೂರ್ಣ ಸುರಕ್ಷಾ ವಿಧಾನಗಳನ್ನು ಅಳವಡಿಸಿದ ದೇಶದಮೊದಲರಿ ಫೈನರಿ ಎಂಆರ್‍ಪಿಎಲ್ ಎಂದು ಹೇಳಿದರು.

ತರಬೇತಿ ಯೋಜನೆ: ಮಂಗಳೂರು ಸ್ಮಾರ್ಟ್ ಸಿಟಿ ಟೋಜನೆಗೆ ಆಯ್ಕೆಯಾಗಿದೆ. ಅದಕ್ಕಾಗಿವಿವಿಧಕ್ಷೇತ್ರಗಳಲ್ಲಿ ತರಬೇತಿ ಪಡೆದ ತಜ್ಞರ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸಂಸ್ಥೆಯು ವಿವಿಧ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ತರಬೇತಿ ನೀಡುವ ಕೆಲಸ ಮಾಡಲಿದೆ ಎಂದು ಎಚ್.ಕುಮಾರ್ ತಿಳಿಸಿದರು.

1,050 ಎಕರೆ ಭೂಮಿ ಯಾವುದೇ ಕಂಪೆನಿ ಬೆಳವಣಿಗೆಗೆ ವಿಸ್ತರಣೆ ಅಗತ್ಯ. ಎಂಆರ್‍ಪಿಎಲ್ ವಿಸ್ತರಣೆಗೆ ಇನ್ನೂ 1,050 ಎಕರೆ ಭೂಮಿ ಅಗತ್ಯವಿದೆ. ಕೆಐಎಡಿಬಿ ಮತ್ತು ಸರ್ಕಾರ ಭೂ ಸ್ವಾಧೀನದ ಕುರಿತು ಕ್ರಮ ಕೈಗೊಳ್ಳುತ್ತಿದ್ದು, ನಮಗೆ ಜಾಗ ಸೂಕ್ತವಾಗಿದ್ದರೆ ಪಡೆಯುತ್ತೇವೆ ಎಂದು ಕುಮಾರ್ ಹೇಳಿದರು. ಎಂಆರ್‍ಪಿಎಲ್‍ಗೆ ಈಗ ಸ್ಥಳಾವಕಾಶ ಕೊರತೆ ಇದೆ. ಅಲ್ಲದೆ, ಇಂಧನ ಗುಣಮಟ್ಟ ಹೆಚ್ಚಿಸಲು ಬಹಳಷ್ಟು ಬದಲಾವಣೆಗಳನ್ನು ಮಾಡಲೇಬೇಕಾಗಿದೆ. ಅದಕ್ಕಾಗಿ ಕಂಪೆನಿಯನ್ನು ವಿಸ್ತರಿಸುವ ಯೋಜನೆ ಹಾಕಿಕೊಳ್ಳಲಾಗಿ ದೆ ಎಂದು ಅವರು ತಿಳಿಸಿದರು. ಸಂಸ್ಥೆಯ ಅಧಿಕಾರಿಗಳಾದ ವೆಂಕಟೇಶ್, ಎ.ಕೆ.ಸಾಹು, ಲಕ್ಷ್ಮೀನಾರಾಯಣ ಇದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದೇಶವಾಸಿಗಳಿಗೆ ಗುಡ್ ನ್ಯೂಸ್: GST ಸ್ಲ್ಯಾಬ್‌ಗಳಲ್ಲಿ ಮಹತ್ವದ ಬದಲಾವಣೆ; ಇನ್ಮುಂದೆ ಎರಡೇ ತೆರಿಗೆ

207 ಮೀಟರ್ ಎತ್ತರಕ್ಕೆ ಉಕ್ಕಿದ ಯಮುನೆ; ದೆಹಲಿಯ ತಗ್ಗು ಪ್ರದೇಶ, ಮಾರುಕಟ್ಟೆಗಳು ಜಲಾವೃತ

ನಟ ದರ್ಶನ್ ಬಳ್ಳಾರಿ ಜೈಲಿಗೆ ಸ್ಥಳಾಂತರ?: ಹಾಸಿಗೆ, ದಿಂಬು ಬೇಡಿಕೆ ತೀರ್ಪು ಸೆ.9ಕ್ಕೆ ಕಾಯ್ದಿರಿಸಿದ ಕೋರ್ಟ್!

VIKRAM-32: ಭಾರತದ ಹೊಸ ಬಾಹ್ಯಾಕಾಶ ದರ್ಜೆಯ ಮೈಕ್ರೋಪ್ರೊಸೆಸರ್; Microchip ಮಹತ್ವ, ವಿಶೇಷತೆ ಏನು? ಇಲ್ಲಿದೆ ಮಾಹಿತಿ!

'DNA ಕಳ್ಳತನ' ಭೀತಿ.. ಚೀನಾದಲ್ಲಿ ಸರ್ವಾಧಿಕಾರಿ Kim Jong-un ಮುಟ್ಟಿದ ಎಲ್ಲ ವಸ್ತುಗಳ ಸ್ವಚ್ಛಗೊಳಿಸಿದ ಸಿಬ್ಬಂದಿ, ಕಾರಣ ಏನು? video

SCROLL FOR NEXT