ಕಟ್ಟಡ ಮೌಲ್ಯ ಬೆಂಗಳೂರಿಗೆ 3ನೇ ಸ್ಥಾನ
ವಾಣಿಜ್ಯ ಮತ್ತು ಉದ್ಯಮ ನಡೆಸಲು ಕಟ್ಟಡ ಬಾಡಿಗೆ ನೀಡುವ ವಲಯದಲ್ಲಿ ಬೆಂಗಳೂರು ಮೂರನೆ ಅತ್ಯುತ್ತಮ ಮತ್ತು ಬಂಡವಾಳಕ್ಕೆ ಮೌಲ್ಯ ತಂದುಕೊಡುವ ನಗರ...
ನವದೆಹಲಿ: ವಾಣಿಜ್ಯ ಮತ್ತು ಉದ್ಯಮ ನಡೆಸಲು ಕಟ್ಟಡ ಬಾಡಿಗೆ ನೀಡುವ ವಲಯದಲ್ಲಿ ಬೆಂಗಳೂರು ಮೂರನೆ ಅತ್ಯುತ್ತಮ ಮತ್ತು ಬಂಡವಾಳಕ್ಕೆ ಮೌಲ್ಯ ತಂದುಕೊಡುವ ನಗರ ಎಂದು ರಾಯಲ್ ಇನ್ಸ್ ಟ್ಯೂಷನ್ ಚಾರ್ಟರ್ಡ್ ಸರ್ವೇಯರ್ಸ್(ಆರ್ಐಸಿಎಸ್) ರೂಪಿಸಿದ್ದ ಮಾರ್ಗಸೂಚಿಗಳ ಅನುಸಾರ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ. 12 ತಿಂಗಳ ಬಂಡವಾಳ ಮೌಲ್ಯ ವೃದ್ಧಿಯಲ್ಲಿ ಡಬ್ಲಿನ್, ಬೆಂಗಳೂರು ಮತ್ತು ಬುಡಾಪೆಸ್ಟ್ ಪ್ರಮುಖ ವಾಗಿವೆ. ದೇಶದ ಇತರ ವಲಯಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಕಚೇರಿ ಬಾಡಿಗೆಯಲ್ಲಿ ಉತ್ತಮ ಮೌಲ್ಯ ತಂದುಕೊಡಲಿದೆ. ಕಳೆದ ಹಲವು ವರ್ಷ ಗಳಿಂದ ಬೆಂಗಳೂರು ಉತ್ತಮ ಸ್ಥಾನದಲ್ಲಿದೆ ಎಂದು ಆರ್ಐಸಿಎಸ್ ದಕ್ಷಿಣ ಏಷ್ಯಾ ವಿಭಾಗದ ವ್ಯವಸ್ಥಾಪಕ ನಿರ್ದೇಶಕರಾದ ದೇವಿನ ಗಿಲ್ದಿಯಾಳ್ ಹೇಳಿದ್ದಾರೆ. ಮುಂಬೈ ಮತ್ತು ದೆಹಲಿಗೆ ಹೋಲಿಸಿದರೆ ಬೆಂಗ ಳೂರಿನಲ್ಲಿ ಕಟ್ಟಡಗಳು ಬಾಡಿಗೆ ಇಲ್ಲದೆ ನಿಂತಿರುವ ಪ್ರಮಾಣ ಕಡಿಮೆ. ನಿರ್ಮಾಣ ಕಂಪನಿಗಳು ಹೆಚ್ಚಿನ ಸಾಲವನ್ನು ಹೊಂದಿಲ್ಲ, ಎಲ್ಲ ಯೋಜನೆಗಳು ಸಮ ಯಕ್ಕೆ ಸರಿಯಾಗಿ ಪೂರ್ಣಗೊಳ್ಳಲಿದ್ದು ಎ ದರ್ಜೆ ಕಚೇರಿ ಕಟ್ಟಡಗಳಿಗೆ ಹೆಚ್ಚಿನ ಬೇಡಿಕೆ ಇದೆ.