ಮುಂಬೈ: ಉತ್ತಮ ನಿವೃತ್ತಿ ಸೌಲಭ್ಯ, ಬ್ಯಾಂಕ್ ಸುಧಾರಣೆಗಳನ್ನು ವಿರೋಧಿಸಿ ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ಸಿಬ್ಬಂದಿ ನವೆಂಬರ್ 19ರಂದು ಗುರುವಾರ ಮುಷ್ಕರ ನಡೆಸಲಿದ್ದಾರೆ.
ಆರ್ ಬಿಐನಲ್ಲಿ 17 ಸಾವಿರ ಸಿಬ್ಬಂದಿ ಇದ್ದು ಎಲ್ಲರೂ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಚೆಕ್ ಕ್ಲಿಯರೆನ್ಸ್, ವಿದೇಶಿ ವಿನಿಮಯ ವಹಿವಾಟು ಮತ್ತಿತರ ಕಾರ್ಯಾಚರಣೆಗಳಿಗೆ ಅಡಚಣೆ ಉಂಟಾಗುವ ಸಾಧ್ಯತೆಗಳಿವೆ.