ವಾಣಿಜ್ಯ

2 ವರ್ಷದ ನಂತರ ಡಾಲರ್ ಎದುರು ರುಪಾಯಿ ಮೌಲ್ಯ ಕನಿಷ್ಠ

Vishwanath S
ಮುಂಬೈ: ಎರಡು ವರ್ಷಗಳ ನಂತರ ಡಾಲರ್ ಎದುರು ರುಪಾಯಿ ಮೌಲ್ಯ ಕನಿಷ್ಠ ಮಟ್ಟಕ್ಕೆ ಕುಸಿದಿದೆ. 
2013ರ ಸೆಪ್ಟೆಂಬರ್‌ನಲ್ಲಿ ರೂಪಾಯಿ ಮೌಲ್ಯ 67.07ಕ್ಕೆ ಕುಸಿದು ಇದು ಇದುವರೆಗಿನ ಕನಿಷ್ಠ ಮೌಲ್ಯವಾಗಿತ್ತು. ಇಂದು ರುಪಾಯಿ ಮೌಲ್ಯವು 19 ಪೈಸೆಗಳಷ್ಟು ಕುಸಿತ ಕಂಡಿದ್ದು, ಎರಡು ವರ್ಷಗಳಲ್ಲೇ ಕನಿಷ್ಠ ಮಟ್ಟವಾದ ರು. 66.76ಕ್ಕೆ ಇಳಿದಿದೆ.
ಬ್ಯಾಂಕುಗಳು ಮತ್ತು ಆಮದುದಾರರಿಂದ ಡಾಲರ್‌ ಬೇಡಿಕೆ ಹೆಚ್ಚಿರುವುದರಿಂದ ರೂಪಾಯಿ ವಿನಿಮಯ ಮೌಲ್ಯ ಕಳೆದ 2 ದಿನಗಳಲ್ಲಿ ದಾಖಲೆ ಪ್ರಮಾಣದಲ್ಲಿ 44 ಪೈಸೆಗಳಷ್ಟು ಅಂದರೆ ಶೇ 0.66ರಷ್ಟು ಅಪಮೌಲ್ಯಗೊಂಡಿದೆ.
ರಷ್ಯಾ ಯುದ್ದ ವಿಮಾನವನ್ನು ಟರ್ಕಿ ಹೊಡೆದುರುಳಿಸಿದ ನಂತರ ಅಂತರರಾಷ್ಟ್ರೀಯ ಹಣಕಾಸು ಮಾರುಕಟ್ಟೆಯಲ್ಲಿ ತಲ್ಲಣ ಮೂಡಿದೆ. ಇದರ ಜತೆಗೆ ಡಿಸೆಂಬರ್‌ ಮೊದಲ ವಾರದಲ್ಲಿ ನಡೆಯಲಿರುವ ಅಮೆರಿಕ ಮತ್ತು ಯೂರೋಪಿಯನ್‌ ಸೆಂಟ್ರಲ್‌ ಬ್ಯಾಂಕ್‌ಗಳ ನೀತಿ ನಿರೂಪಣೆ ಸಭೆ ಕುರಿತ ವರದಿಗಳು ಕೂಡ ಮಾರುಕಟ್ಟೆಯಲ್ಲಿ ಸಾಕಷ್ಟು ಅಸ್ಥಿರತೆ ಮೂಡಿಸಿದೆ.
SCROLL FOR NEXT