ಮೋದಿ ಪ್ರಧಾನಿಯಾದ ಮೇಲೆ ದೇಶಕ್ಕೆ ಹರಿದು ಬಂತು ಬಂಡವಾಳ
ಎಫ್ಡಿಐ ನಿಯಮ ಸಡಿಲಿಕೆಯಿಂದ ಒಂದೂವರೆ ವರ್ಷದಲ್ಲಿ 548 ಯೋಜನೆಗಳ ಮೂಲಕ 346 ಬಿಲಿಯನ್ ಯುಎಸ್ ಡಾಲರ್ ಬಂಡವಾಳ ಹರಿದುಬಂದಿದೆ...
ಬೆಂಗಳೂರು: ಎಫ್ಡಿಐ ನಿಯಮ ಸಡಿಲಿಕೆಯಿಂದ ಒಂದೂವರೆ ವರ್ಷದಲ್ಲಿ 548 ಯೋಜನೆಗಳ ಮೂಲಕ 346 ಬಿಲಿಯನ್ ಯುಎಸ್ ಡಾಲರ್ ಬಂಡವಾಳ ಹರಿದುಬಂದಿದೆ ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವ ಡಾ.ವಿ.ಕೆ.ಸಿಂಗ್ ಹೇಳಿದರು. ಐಸಿಇಬಿಎಫ್ ಆಯೋಜಿಸಿದ್ದ ಭಾರತ ಮಧ್ಯ ಯೂರೋಪ್ ವ್ಯವಹಾರ ವೇದಿಕೆ ಎರಡನೇ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ವಿವಿಧ ದೇಶ ಗಳಿಗೆ ಪ್ರವಾಸ ಕೈಗೊಂಡು ಅತಿ ಹೆಚ್ಚು ಬಂಡವಾಳ ಹೂಡಿಕೆಯಾಗಲು ಶ್ರಮಿಸಿದ್ದಾರೆ. ಅದರಲ್ಲಿ ಯೂ ಮುಖ್ಯವಾಗಿ ಮಧ್ಯ ಯೂರೋ ಪಿಯನ್ ದೇಶಗಳ ನಡುವೆ ಬಾಂಧವ್ಯ
ವೃದಿಯಾಗಿದೆ. ಕಳೆದ ಒಂದೂವರೆ ವರ್ಷಗಳಲ್ಲಿ 548 ಯೋಜನೆಗಳ ಮೂಲಕ 346 ಬಿಲಿಯನ್ ಯುಎಸ್ ಡಾಲರ್ ಬಂಡವಾಳ ಹೂಡಿ ಕೆಯಾಗಿದೆ. ಇವುಗಳಲ್ಲಿ 208 ಯೋಜನೆಗಳನ್ನು ಸರ್ಕಾರವೇ ಮುತುವರ್ಜಿ ವಹಿಸಿ ನಿರ್ವಹಿಸು ತ್ತಿದ, 112 ಬಿಲಿಯನ್ ಯುಎ ಸ್ ಡಾಲ ರ್ ಬಂಡವಾಳ ಹೂಡಿಕೆಯಾಗಿದೆ ಎಂದರು. ಭಾರತದಲ್ಲಿ ಬಂಡವಾಳ ಹೂಡಿಕೆಗೆ ವಿಫುಲ ಅವಕಾಶಗಳಿವೆ. ದೇಶದ ಆರ್ಥಿಕತೆ ಯು ಪ್ರಗತಿ ಹೊಂದಿದ್ದು, ಅನೇಕ ದೇಶ ಗಳು ಬಂಡವಾಳ ಹೂಡಿಕೆಗೆ ಮುಂದೆ ಬಂದಿವೆ. ಕೈಗಾರಿಕಾ ನೀತಿ ಸಡಿಲಿಸಿ, ಕಡಿಮೆ ಸಮಯದಲ್ಲಿ ಪರವಾನಗಿ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಭಾರತ ಏಷ್ಯಾದ ಅತಿ ವೇಗವಾಗಿ ಬೆಳವಣಿ ಗೆಯಾಗುತ್ತಿರುವ ಆರ್ಥಿಕತೆ ಮಾತ್ರವಾಗಿರದೆ, ವಿಶ್ವದ ಎರಡನೇ ಅತಿ ದೊಡ್ಡದಾದ, ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ದೇಶವಾಗಿದೆ. ಕಳೆದ 10 ವರ್ಷಗಳಲ್ಲಿ ದೇಶ ದ ಆರ್ಥಿಕತೆಯಲ್ಲಿ ಗಣನೀಯ ಬೆಳವಣಿಗೆ ಯಾಗಿದ್ದು, ವಿವಿಧ ರಾಜ್ಯಗಳಿಗೆ ಹೋಲಿಸಿ
ದರೆ ಕರ್ನಾಟಕ ಪ್ರಮುಖ ಸ್ಥಾನದಲ್ಲಿದೆ ಎಂದರು. ಈ ವೇಳೆ ಐಸಿಇಬಿ ವೇದಿಕೆಯ ಸಲಹೆ ಗಾರ ರಾಖೇಶ್ ಭಕ್ಷಿ, ಪೋಲಾಂಡ್‍ನ ವಿದೇಶ ಖಾತೆ ಉಪಮಂತ್ರಿ ಲೆಝೇಕ್ ಸೊಝಿವಿಕಾ,
ಹಂಗೇರಿಯ ವಿದೇಶ ಖಾತೆ ಉಪಮಂತ್ರಿ ಎಚ್.ಇ.ಲಾಜ್ಲೊ ಎಸ್, ಎಫ್ಐಸಿಸಿ ಐನ ಅಧ್ಯಕ್ಷ ಉಲ್ಲಾಸ್ ಕಾಮತ್ ಇದ್ದರು.