ಸಾಂದರ್ಭಿಕ ಚಿತ್ರ 
ವಾಣಿಜ್ಯ

2ಜಿ ಹಗರಣದ ಮಾಹಿತಿ ತಿರುಚಿದ್ದೇಕೆ, ಉತ್ತರಿಸಿ

2ಜಿ ಸ್ಪೆಕ್ಟ್ರಂ ಹಗರಣದ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯದಿಂದ ಸಿಬಿಐ ಭಾರಿ ಮುಖಭಂಗ ಅನುಭವಿಸಿದೆ. ಮಾಜಿ ಟೆಲಿಕಾಂ ಕಾರ್ಯದರ್ಶಿ...

ನವದೆಹಲಿ: 2ಜಿ ಸ್ಪೆಕ್ಟ್ರಂ ಹಗರಣದ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯದಿಂದ ಸಿಬಿಐ ಭಾರಿ ಮುಖಭಂಗ ಅನುಭವಿಸಿದೆ. ಮಾಜಿ ಟೆಲಿಕಾಂ ಕಾರ್ಯದರ್ಶಿ ಶ್ಯಾಮಲ್ 
ಘೋಷ್ ಮತ್ತು 2002ರಿಂದ ಆರೋಪ ಎದುರಿಸುತ್ತಿದ್ದ ಮೂರು ಟೆಲಿಕಾಂ ಕಂಪನಿಗಳನ್ನು ಖುಲಾಸೆಗೊಳಿಸಿರುವ ಕೋರ್ಟ್ ಪ್ರಕರಣವನ್ನು ಸಂಪೂರ್ಣ ತಿರುಚಿ ಮಾಹಿತಿಗಳನ್ನು ಕೃತ್ರಿಮಗೊಳಿಸಿ ಆರೋಪಪಟ್ಟಿ ಸಿದ್ಧಪಡಿಸಿದೆಯೆಂದು ಸಿಬಿಐಯನ್ನು ತರಾಟೆಗೆ  ತೆಗೆದುಕೊಂಡಿದೆ. ``ಆರೋಪಪಟ್ಟಿಯನ್ನು ಉದ್ದೇಶಪೂರ್ವಕವಾಗಿ ತಿರುಚಿ ಅಸ್ಪಷ್ಟ ಮಾಹಿತಿ ಸೇರಿಸಲಾಗಿದೆ. ಕರಡು ಪಟ್ಟಿ ಓದಿದವರಿಗೆ ಭಾರಿ ಅಪರಾಧ ನಡೆದಿದೆ ಎಂಬ ಭಾವ ಬರುವಂತೆ ಮಾಡಲಾಗಿದೆ. ಆದರೆ ದಾಖಲೆಗಳ ಪ್ರಕಾರ ಆರೋಪಿಗಳಿಂದ ಅಂಥಾದ್ದೇನೂ ನಡೆದೇ ಇಲ್ಲ'' ಎಂದು ಕೋರ್ಟ್ ಸಿಬಿಐ ನೀಡಿದ 235 ಪುಟಗಳ ಚಾರ್ಜ್‍ಶೀಟ್ ಅನ್ನು ತಳ್ಳಿಹಾಕಿದೆ. ವಿಶೇಷ  ಸಿಬಿಐ ಜಡ್ಜ್ ಓಪಿ ಸೈನಿ ಅವರು, ಆರೋಪಪಟ್ಟಿಯನ್ನು ಪರಿಶೀಲಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಮತ್ತೊಮ್ಮೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲು ಸಿಬಿಐ ನಿರ್ದೇಶಕ ರಿಗೆ ಆದೇಶಿಸಿದ್ದಾರೆ. 2001ರಲ್ಲಿ ಪ್ರಮೋದ್ ಮಹಾಜನ್ ಟೆಲಿಕಾಂ ಸಚಿವ ರಾಗಿ ನೇಮಕವಾದ ನಂತರ ಬೇಕೆಂದೇ ಪ್ರಕರಣ ವನ್ನು ದಾರಿತಪ್ಪಿಸಲಾಗಿದೆ ಎಂಬುದನ್ನೂ ಕೋರ್ಟ್ ಉಲ್ಲೇಖಿಸಿದೆ. ಘೋಷ್‍ರೊಂದಿಗೆ 3 ಟೆಲಿಕಾಂ ಕಂಪನಿಗಳಾದ ಹಚಿನ್ಸನ್ ಮ್ಯಾಕ್ಸ್(ಪ್ರೈ)ಲಿ, ಸ್ಟೆರ್ಲಿಂಗ್ ಸೆಲ್ಯುಲಾರ್ ಲಿ ಮತ್ತು  ಭಾರ್ತಿ ಸೆಲ್ಲುಲಾರ್ ಲಿ. ಕಂಪನಿಗಳು ಈ ಮೊದಲು ಸಿಬಿಐ ವರದಿ ಅನ್ವಯ ಅಪರಾಧಿಗಳೆಂದು ಗುರುತಿಸಲ್ಪಟ್ಟಿದ್ದವು. ಟೆಲಿಕಾಂ ಇಲಾಖೆ ಹೆಚ್ಚುವರಿ ಸ್ಪ್ರೆಕ್ಟ್ರಂ ವರ್ಗೀಕರಣದ ಹಗರಣದಲ್ಲಿ ಈ ಕಂಪನಿಗಳಿಂದ  ಬೊಕ್ಕಸಕ್ಕೆ ರು.846.44 ಕೋಟಿ ನಷ್ಟವಾಗಿತ್ತು ಎಂಬುದು ಆರೋಪದಲ್ಲಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT