ಮುಂಬೈ: ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರದ ವಹಿವಾಟಿನಲ್ಲಿ 308.09 ಅಂಕ ಕುಸಿದು 24,893.81ಕ್ಕೆ ದಿನದಂತ್ಯ ಕಂಡಿತು. ಹೂಡಿಕೆದಾರರು ಲಾಭ ಗಳಿಸಲು ಹೆಚ್ಚು ಮಾರಾಟದಲ್ಲಿ ತೊಡಗಿದ್ದರಿಂದ ಸೂಚ್ಯಂಕ ಕುಸಿಯಿತು.
ಈ ಹಿಂದೆ 2014ರ ಜೂನ್ 4ರಂದು ಸೂಚ್ಯಂಕ ಈ ಮಟ್ಟಕ್ಕೆ ಇಳಿದಿತ್ತು. ರಾಷ್ಟ್ರೀಯ ಷೇರು ಪೇಟೆ ಸೂಚ್ಯಂಕ ನಿಫ್ಟಿ ಸಹ ಪ್ರಮುಖ ಘಟ್ಟ 7,600ಕ್ಕಿಂತಲೂ ಕೆಳಗಿಳಿದಿದೆ. 96.25 ಅಂಕ ಕುಸಿದ ನಿಫ್ಟಿ 7,558.80ಕ್ಕೆ ಕೊನೆಗೊಂಡಿತು. ಆಕ್ಸಿಸ್ ಬ್ಯಾಂಕ್, ವೇದಾಂತ, ಐಸಿಐಸಿಐ ಬ್ಯಾಂಕ್, ಹಿಂಡಾಲ್ಕೊ, ಲುಪಿನ್, ಬಿಎಚ್ ಇಎಲ್, ಡಾ.ರೆಡ್ಡೀಸ್, ಕೋಲ್ ಇಂಡಿಯಾ, ಸನ್ಫಾರ್ಮ, ಎನ್‍ಟಿಪಿಸಿ, ಎಲ್‍ಅಂಡ್‍ಟಿ, ಎಸ್‍ಬಿಐ, ಟಾಟಾ ಸ್ಟೀಲ್, ಗೇಲ್, ಇನ್ಫೋಸಿಸ್, ಎಚ್‍ಯುಎಲ್ ಹೆಚ್ಚು ಕುಸಿದವು. ರುಪಾಯಿ 2 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿಯಿತು.
ಸೋಮವಾರ 36 ಪೈಸೆ ಕುಸಿದು 66.82ಕ್ಕೆ ತಲುಪಿತು. ವಲಯವಾರು ಸೂಚ್ಯಂಕಗಳಲ್ಲಿ ಆರೋಗ್ಯ ಕ್ಷೇತ್ರದ ಇಂಡೆಕ್ಸ್ ಶೇ 2.57ರಷ್ಟು ಕುಸಿಯಿತು. ಲೋಹ ಶೇ.2.31, ಬ್ಯಾಂಕೆಕ್ಸ್ 2.10, ವಿದ್ಯುತ್ 1.92, ಬಂಡವಾಳ ಸರಕು 1.89, ರಿಯಾಲ್ಟಿ 1.75 ಮತ್ತು ಪಿಎಸ್‍ಯು ಸೂಚ್ಯಂಕ ಶೇ.1.64ರಷ್ಟು ಕುಸಿತ ಕಂಡವು.