ಹಣದುಬ್ಬರ 
ವಾಣಿಜ್ಯ

ಹಣದುಬ್ಬರ ಮತ್ತೆ ಇಳಿಕೆ

ಆಗಸ್ಟ್ ತಿಂಗಳಲ್ಲಿ ಸಗಟು ದರ ಆಧಾರಿತ ಹಣದುಬ್ಬರ ಶೇ.(-)4 .05 ರಿಂದ ಶೇ.(-) 4 .95 ಕ್ಕೆ ಇಳಿಕೆಯಾಗಿದೆ.

ನವದೆಹಲಿ: ಆಗಸ್ಟ್ ತಿಂಗಳಲ್ಲಿ ಸಗಟು ದರ ಆಧಾರಿತ ಹಣದುಬ್ಬರ ಶೇ.(-)4 .05 ರಿಂದ ಶೇ.(-) 4 .95 ಕ್ಕೆ ಇಳಿಕೆಯಾಗಿದೆ. ಇಂಧನ ಬೆಲೆ ಕಡಿಮೆಯಾಗಿರುವುದು ಹಣದುಬ್ಬರ ಇಳಿಕೆಯಾಗಲು ಪ್ರಮುಖ ಕಾರಣವಾಗಿದೆ.
ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ವಾರ್ಷಿಕ ಹಣದುಬ್ಬರ ಕಳೆದ ವರ್ಷದ ಆಗಸ್ಟ್ ನಲ್ಲಿ ಶೇ.3 .85 ರಷ್ಟಿತ್ತು. ಪ್ರಸಕ್ತ ತಿಂಗಳಿನಲ್ಲಿ, ಈರುಳ್ಳಿ ಸೇರಿದಂತೆ  ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಕಳೆದ ವರ್ಷದ ಆಗಸ್ಟ್ ಗಿಂತ ಈ ವರ್ಷದಲ್ಲಿ ಶೇ.65 ರಷ್ಟು ಬೆಲೆ ಏರಿಕೆಯಾಗಿದೆ ಎಂದು ಅಂದಾಜಿಸಲಾಗಿದ್ದು ಆಹಾರಧಾನ್ಯಗಳೂ ಶೇ.36 ರಷ್ಟು ದುಬಾರಿಯಾಗಿವೆ.
ಇದೇ ವೇಳೆ ಆಲೂಗಡ್ಡೆ ಬೆಲೆ ಶೇ.52 ರಷ್ಟು ಹಾಗೂ ತರಕಾರಿ ಬೆಲೆ ಶೇ.21 ರಷ್ಟು ಇಳಿಕೆಯಾಗಿದೆ. ಉತ್ಪಾದಿತ ಉತ್ಪನ್ನಗಳ ವರ್ಗದಲ್ಲಿ ಆಹಾರಕ್ಕೆ ಸಂಬಂಧಿಸಿದ ಸರಕುಗಳ ಬೆಲೆ ಶೇ.19 ರಷ್ಟು ಇಳಿಕೆಯಾಗಿದೆ. ಇಂಧನ ಕ್ಷೇತ್ರದಲ್ಲಿ ಪೆಟ್ರೋಲ್ ಶೇ.13 .26 ರಷ್ಟು ಅಗ್ಗವಾಗಿದ್ದರೆ. ಡೀಸೆಲ್ ಶೇ.24 .54 ರಷ್ಟು ಅಗ್ಗವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT