ವಾಣಿಜ್ಯ

ಡಾಲರ್ ಎದುರು ಚೇತರಿಸಿಕೊಂಡ ಚೀನಾ ಕರೆನ್ಸಿ

Srinivas Rao BV

ಬೀಜಿಂಗ್: ಅಪಮೌಲ್ಯಕ್ಕೊಳಗಾಗಿದ್ದ ಚೀನಾದ ಕರೆನ್ಸಿ ಯುವಾನ್‌ ದರ ಡಾಲರ್‌ ಎದುರು 63 ಬೇಸಿಸ್ ಪಾಯಿಂಟ್ ಗಳಷ್ಟು ಚೇತರಿಕೆ ಕಂಡಿದೆ.

ಚೀನಾ ವಿದೇಶಿ ವಿನಿಮಯ ಟ್ರೇಡಿಂಗ್ ಸಿಸ್ಟಮ್ ನ ಪ್ರಕಾರ ಯುಎಸ್ ಫೆಡರಲ್ ರಿಸರ್ವ್ ತನ್ನ ಬಡ್ಡಿದರದ ಮಾನದಂಡದಲ್ಲಿ ಬದಲಾವಣೆ ಮಾಡದೇ ಇರುವುದರಿಂದ ಚೀನಾ ಕರೆನ್ಸಿ ಮೌಲ್ಯ ಚೇತರಿಕೆಯಾಗಿದೆ.  ಪ್ರತಿ ವಹಿವಾಟಿನ ದಿನದಂದು ಕೇಂದ್ರ ಸಮಾನತೆ ದರದ ಅನ್ವಯ ಚೀನಾದ ಯುವಾನ್ ಶೇ.2 ರಷ್ಟು ಏರಿಕೆ ಅಥವಾ ಇಳಿಕೆಯಾಗಲು ಸಾಧ್ಯವಿದೆ.   

ಡಾಲರ್ ಎದುರು ಚೀನಾದ ಕರೆನ್ಸಿಯ ವಿದೇಶಿ ವಿನಿಮಯವನ್ನು ಅಭಿವೃದ್ಧಿಗೊಳಿಸಲು ಚೀನಾದ ಪೀಪಲ್ಸ್ ಬ್ಯಾಂಕ್, ವಿನಿಮಯ ದರ ರಚನೆ ವ್ಯವಸ್ಥೆಯ ಸುಧಾರಣೆ ಜಾರಿಗೆ ತಂದಿತ್ತು.

SCROLL FOR NEXT