ವಾಣಿಜ್ಯ

ಸ್ಯಾಮ್ಸಂಗ್ ಹಳೇ ಫೋನುಗಳ ಮಾರಾಟಕ್ಕೆ ತಡೆ

Shilpa D

ವಾಷಿಂಗ್ಟನ್ : ಆ್ಯಪಲ್ ಹಾಗೂ ಸ್ಯಾಮ್ಸಂಗ್ ನಡುವೆ ನಡೆಯುತ್ತಿರುವ ದೀರ್ಘ ಕಾಲದ ಕಾನೂನು ಹೋರಾಟ ಹೊಸ ಮಗ್ಗುಲಿಗೆ ಹೊರಳಿದೆ. ಸ್ಯಾಮ್ಸಂಗ್‌ನ ಕೆಲವೊಂದು ಹಳೆಯ ಫೋನ್ ಮಾಡೆಲ್‌ಗಳನ್ನು ಅಮೆರಿಕದಲ್ಲಿ ಮಾರಾಟ ಮಾಡುವಂತಿಲ್ಲ ಎಂದು ಅಮೆರಿಕಾದ  ಫೆಡರಲ್ ನ್ಯಾಯಾಲಯ ತೀರ್ಪು ನೀಡಿದೆ.

ಆ್ಯಪಲ್ ಐಫೋನ್‌ನ ತಂತ್ರಜ್ಞಾನವನ್ನೇ ನಕಲಿಸಿ ಅವುಗಳನ್ನು ರಚಿಸಲಾಗಿದೆ ಎಂಬುದು ನ್ಯಾಯಾಲಯದಲ್ಲಿ ದೃಢಪಟ್ಟ ಸಂಗತಿ. ಇದರಿಂದ ಆ್ಯಪಲ್ ಹೋರಾಟಕ್ಕೆ ಜಯ ದೊರೆತಂತಾಗಿದೆಯಾದರೂ, ಸ್ಯಾಮ್ಸಂಗ್ ಮೇಲೆ ಅಷ್ಟೇನೂ ದೊಡ್ಡ ಮಟ್ಟದ ಪ್ರಭಾವ ಬೀರಲಾರದು. ಪ್ರಮುಖ ಕಾರಣವೆಂದರೆ, ಈ ತೀರ್ಪು ಹಳೆಯ ಫೋನುಗಳು ಅಂದರೆ ಈಗ ಜನಪ್ರಿಯತೆ ಕಳೆದುಕೊಂಡಿರುವ ಫೋನುಗಳಿಗೆ ಸಂಬಂಧಿಸಿದ್ದಾಗಿದೆ.

ತೀರಾ ಇತ್ತೀಚಿನ ಫೋನ್ ಎಂದರೆ ಗ್ಯಾಲಕ್ಸಿ ಎಸ್3. ಆ ಬಳಿಕ ಅದರ ಮುಂದಿನ ಆವೃತ್ತಿಗಳು ಸಾಕಷ್ಟು ಬಂದಿದ್ದು, ಈಗ ಗ್ಯಾಲಕ್ಸಿ ಎಸ್6 ಮಾರುಕಟ್ಟೆಯಲ್ಲಿದೆ.

SCROLL FOR NEXT