ಸೆಬಿ ಕಚೇರಿ 
ವಾಣಿಜ್ಯ

ಸೆಬಿಯಿಂದ ಪಿಎಸಿಎಲ್ ಲಿ.ಸಂಸ್ಥೆಗೆ ಭಾರೀ ದಂಡ

ಸೆಬಿ ಸಂಸ್ಥೆ ಪಿಎಸಿಎಲ್ ಲಿ. ಸಂಸ್ಥೆಗೆ ಭಾರೀ ದಂಡವನ್ನು ಹೇರಿದ್ದು , 7295.5 ಕೋಟಿ ದಂಡವನ್ನು ಪಾವತಿ ಮಾಡುವಂತೆ ಸೂಚಿಸಿದೆ...

ಮುಂಬಯಿ:  ಸೆಬಿ ಸಂಸ್ಥೆ  ಪಿಎಸಿಎಲ್ ಲಿ. ಸಂಸ್ಥೆಗೆ  ಭಾರೀ ದಂಡವನ್ನು ಹೇರಿದ್ದು ,  7295.5 ಕೋಟಿ ದಂಡವನ್ನು ಪಾವತಿ ಮಾಡುವಂತೆ ಸೂಚಿಸಿದೆ. ಪಿಎಸಿಎಲ್ ಸಂಸ್ಥೆ ಮತ್ತು ಅದರ ನಾಲ್ವರು ನಿರ್ದೇಶಕರು ಸಾರ್ವಜನಿಕರಿಂದ ಅಕ್ರಮವಾಗಿ ಮತ್ತು ಮೋಸದಿಂದ ನಿಧಿ ಸಂಗ್ರಹ ಮಾಡಿದ್ದಾರೆಂದು ಸೆಬಿ ಆರೋಪಿಸಿದೆ.

 ಜನಸಾಮಾನ್ಯರಿಗೆ ದೊಡ್ಡ ಪ್ರಮಾಣದಲ್ಲಿ ವಂಚಿಸಿದ ಕಂಪನಿಗೆ ಗರಿಷ್ಠ ದಂಡಕ್ಕೆ ವಿಧಿಸುವುದಕ್ಕೆ ಅರ್ಹತೆ ಪಡೆದಿದೆ ಎಂದು ಸೆಬಿ ಹೇಳಿದೆ. ಕಳೆದ ವರ್ಷ ಸೆಬಿ ಪಿಎಸಿಎಲ್ ಸಂಸ್ಥೆ 15 ವರ್ಷಗಳ ಅವಧಿಯಲ್ಲಿ ಸಂಗ್ರಹಿಸಿದ 49, 100 ಕೋಟಿ ಹಣವನ್ನು ರೀಫಂಡ್ ಮಾಡುವಂತೆ ಆದೇಶಿಸಿತ್ತು.

 ಪಿಎಸಿಎಲ್ ಸಂಸ್ಥೆ ಅಪೀಲು ಸಲ್ಲಿಸಿದ್ದರಿಂದ ಸೆಕ್ಯೂರಿಟೀಸ್ ಅಪೀಲು ನ್ಯಾಯಮಂಡಳಿ ಕಳೆದ ತಿಂಗಳು ರೀಫಂಡ್ ಆದೇಶಕ್ಕೆ ತಡೆ ವಿಧಿಸಿತ್ತು.  ಸೆಬಿ ಮಂಗಳವಾರ ನೀಡಿದ ಇತ್ತೀಚಿನ ಆದೇಶದಲ್ಲಿ ಪಿಎಸಿಎಲ್ ಭಾರೀ ಪ್ರಮಾಣದಲ್ಲಿ ಅಕ್ರಮವಾಗಿ ಹಣ ಸಂಗ್ರಹಿಸಿದ್ದು, ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ 2423 ಕೋಟಿ ಲಾಭ ಗಳಿಸಿದೆ.  ಇಡೀ ಸತ್ಯಾಂಶಗಳನ್ನು ಮತ್ತು ಸಂದರ್ಭಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಗರಿಷ್ಠ ದಂಡಕ್ಕೆ ಅರ್ಹವಾದ ಪ್ರಕರಣ ಎಂದು ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!