ಅಂಬಾನಿ ಸೋದರರಿಂದ 4ಜಿ ಸೇವೆ
ಅಂಬಾನಿ ಸಹೋದರರಾದ ಮುಕೇಶ್ ಮತ್ತು ಅನಿಲ್ ಅಂಬಾನಿ ಒಂದಾಗುತ್ತಿದ್ದಾರೆ. ಅದು ನಾಲ್ಕನೇ ತಲೆಮಾರಿನ 4ಜಿ...
ನವದೆಹಲಿ: ಅಂಬಾನಿ ಸಹೋದರರಾದ ಮುಕೇಶ್ ಮತ್ತು ಅನಿಲ್ ಅಂಬಾನಿ ಒಂದಾಗುತ್ತಿದ್ದಾರೆ. ಅದು ನಾಲ್ಕನೇ ತಲೆಮಾರಿನ 4ಜಿ ಮೊಬೈಲ್ ನೆಟ್ ವರ್ಕ್ ಸೇವೆಯನ್ನು ಬಿಡುಗಡೆ ಮಾಡುವ ಮೂಲಕ.
ರಿಲಯನ್ಸ್ ಕಮ್ಯುನಿಕೇಶನ್ಸ್ ನ ವಾರ್ಷಿಕ ಮಂಡಳಿ ಸಭೆಯಲ್ಲಿ ಸ್ವತಹ ಅನಿಲ್ ಅಂಬಾನಿಯವರೇ ಈ ವಿಷಯ ತಿಳಿಸಿದ್ದಾರೆ. ಮುಕೇಶ್ ಅಂಬಾನಿಯವರ ರಿಲಯನ್ಸ್ ಜಿಯೋ ಜೊತೆ ಸೇರಿ 4ಜಿ ಮೊಬೈಲ್ ಸೇವೆಯನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ. ಯಾರು, ಎಷ್ಟು ಷೇರು ಹೂಡಿಕೆ ಮಾಡುತ್ತಾರೆ ಎಂದು ಮಾತ್ರ ಹೇಳಿಲ್ಲ.
ತಮ್ಮ ಸಹೋದರ ಮುಕೇಶ್ ಅಂಬಾನಿಯವರ ಜೊತೆ ಸೇರಿ ಈ ವರ್ಷದ ಅಂತ್ಯದಲ್ಲಿ ಬಿಡುಗಡೆ ಮಾಡುವುದಾಗಿ ರಿಲಯನ್ಸ್ ಕಮ್ಯುನಿಕೇಷನ್ಸ್ ನ ಅಧ್ಯಕ್ಷ ಅನಿಲ್ ಅಂಬಾನಿ ಪ್ರಕಟಿಸಿದ್ದಾರೆ.
ರಿಲಯನ್ಸ್ ಸಂಸ್ಥೆಯ ಪಾಲುದಾರಿಕೆಗೆ ಸಂಬಂಧಪಟ್ಟಂತೆ 2002ರಲ್ಲಿ ಧೀರುಬಾಯಿ ಅಂಬಾನಿ ಅವರ ನಿಧನದ ನಂತರ ಈ ಇಬ್ಬರು ಸಹೋದರರ ನಡುವೆ ಅಧಿಕಾರ ಮತ್ತು ವ್ಯವಹಾರ ವಿಷಯಗಳಲ್ಲಿ ಕಲಹವೇರ್ಪಟ್ಟು ಇಬ್ಬರೂ ದೂರವಾಗಿದ್ದರು. ಆ ನಂತರ ಅವರು ಒಟ್ಟಾಗಿದ್ದು 2013ರಲ್ಲಿ.
4ಜಿ ಯೋಜನೆಯನ್ನು ಬಿಡುಗಡೆ ಮಾಡಲು ಒಂದು ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡುವ ಉದ್ದೇಶ ಒಟ್ಟು ರಿಲಯನ್ಸ್ ಸಮೂಹದ್ದು.