ವಾಣಿಜ್ಯ

ಮತ್ತೆ ಬಡ್ಡಿ ದರ ಶೇ 0.25 ಕಡಿತಗೊಳಿಸಿದ ಆರ್‌ಬಿಐ

Vishwanath S

ಮುಂಬೈ: ಅಲ್ಪಾವಧಿ ಬಡ್ಡಿ ದರವಾದ ರೆಪೊ ದರದಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಶೇ 0.25ರಷ್ಟು ಕಡಿತ ಮಾಡಿದೆ.

ಆರ್‌ಬಿಐ ತ್ರೈಮಾಸಿಕ ಹಣಕಾಸು ನೀತಿ ಪರಾಮರ್ಶೆಯನ್ನು ಪ್ರಕಟಿಸಿದೆ. ಇದರಲ್ಲಿ ಬಡ್ಡಿ ದರವನ್ನು ಶೇ.0.25ರಷ್ಟು ಕಡಿತಗೊಳಿಸಿದ್ದು, ಪರಿಣಾಮವಾಗಿ ಗೃಹ ಮತ್ತು ವಾಹನ ಸಾಲಗಳು ಇನ್ನು ಅಗ್ಗವಾಗಲಿವೆ.

ಹಣದುಬ್ಬರ ಇಳಿಕೆಯಾಗಿರುವುದರಿಂದ ಹೂಡಿಕೆಗೆ ಉತ್ತೇಜನ ನೀಡಲು ಆರ್‌ಬಿಐ ಈ ವರ್ಷದಲ್ಲಿ ಮಾಡುತ್ತಿರುವ ನಾಲ್ಕನೆಯ ಬಡ್ಡಿ ದರ ಕಡಿತವಾಗಿದೆ. ಜನವರಿ ಮತ್ತು ಮಾರ್ಚ್‌ನಲ್ಲೂ ರೆಪೊ ದರವನ್ನು ಶೇ 0.25ರಷ್ಟು ತಗ್ಗಿಸಲಾಗಿತ್ತು.

ಬಡ್ಡಿ ದರ ಕಡಿಮೆ ಮಾಡಿರುವುದರಿಂದ ಶೀಘ್ರದಲ್ಲೇ ಬ್ಯಾಂಕುಗಳು ಈ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲಿವೆ ಎಂದು ಗವರ್ನರ್‌ ರಘುರಾಂ ರಾಜನ್‌ ತಿಳಿಸಿದ್ದಾರೆ.

SCROLL FOR NEXT