ವಾಣಿಜ್ಯ

ಇಪಿಎಫ್ ಬಡ್ಡಿದರ ಶೇ.8.7ರಿಂದ ಶೇ.8.8ಕ್ಕೆ ಏರಿಕೆ

Lingaraj Badiger
ನವದೆಹಲಿ: ಕಾರ್ಮಿಕ ಸಂಘಟನೆಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ ಕಡೆಗೂ ನೌಕರರ ಭವಿಷ್ಯನಿಧಿ(ಇಪಿಎಫ್) ಠೇವಣಿಯ ಬಡ್ಡಿದರವನ್ನು ಶೇ.8.7ರಿಂದ 8.8ಕ್ಕೆ ಏರಿಕೆ ಮಾಡಲು ನಿರ್ಧರಿಸಿದೆ.
ಇತ್ತಿಚೀಗಷ್ಟೆ ಇಪಿಎಫ್ ಬಡ್ಡಿದರವನ್ನು 2015–16ನೆ ಸಾಲಿಗೆ ಶೇ 8.7ರಷ್ಟು ನಿಗದಿ ಮಾಡಿ ಕೇಂದ್ರ ಹಣಕಾಸು ಸಚಿವಾಲಯ ಆದೇಶ ಹೊರಡಿಸಿತ್ತು. ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಕಾರ್ಮಿಕ ಸಂಘಟನೆಗಳು ಇಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದವು.
ಈ ವಿಷಯದ ಕುರಿತು ಹಣಕಾಸು ಸಚಿವ ಅರುಣ್‌ ಜೇಟ್ಲಿ ಜತೆ ಚರ್ಚಿಸುವುದಾಗಿ ಭರವಸೆ ನೀಡಿದ್ದ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಅವರು, ಶೇ 8.8ರಷ್ಟು ಬಡ್ಡಿದರವನ್ನು ಏಕೆ ನಿಗದಿಮಾಡಬೇಕು ಎನ್ನುವುದಕ್ಕೆ ಎಲ್ಲಾ ರೀತಿಯ ಸಮರ್ಥನೆಯನ್ನೂ ಹಣಕಾಸು ಸಚಿವಾಲಯಕ್ಕೆ ಕೊಡುವುದಾಗಿ ಹೇಳಿದ್ದರು.
ಇಪಿಎಫ್ ಬಡ್ಡಿದರವರನ್ನು ಶೇ 8.8ಕ್ಕೆ ಏರಿಕೆ ಮಾಡುವಂತೆ ಇಪಿಎಫ್‌ಒ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆದರೆ ಶೇ.8.8 ಬಡ್ಡಿದರ ನೀಡಲೂ ಸಾಧ್ಯವಿಲ್ಲ ಹಣಕಾಸು ಸಚಿವಾಲಯ ಹೇಳಿತ್ತು.
SCROLL FOR NEXT